Thursday, February 5, 2026

ಸತ್ಯ | ನ್ಯಾಯ |ಧರ್ಮ

ಹಠಾತ್ ಇಳಿಕೆ ಕಂಡ ಟೊಮೆಟೊ ಬೆಲೆ ; ಕಂಗಾಲಾದ ರೈತರು

ಕಳೆದ ಎರಡು ತಿಂಗಳಿಂದ 100 ರೂ.ಗಳಿಂದ 150 ರೂ.ವರೆಗೆ ಕೆಲವು ಕಡೆ 190 ರೂ.ವರೆಗೂ ಮಾರಾಟ ಮಾಡಲಾದ ಟೊಮೆಟೊ ಇಂದಿನ ಬೆಲೆ 20 ರೂ. ಆಶ್ಚರ್ಯ ಆದರೂ ಸತ್ಯ. ಈ ಬೆಲೆ ಗ್ರಾಹಕರಿಗೆ ಖುಷಿ ಮತ್ತು ರೈತರಿಗೆ ಕಹಿ ಆದಂತಾಗಿದೆ.

ಟೊಮೆಟೊ ದರದಲ್ಲಿ ದಾಖಲೆ ಮಟ್ಟದ ವಿಪರೀತ ಏರಿಕೆ ಹಿನ್ನೆಲೆಯಲ್ಲಿ ಕೆಂಪು ಸುಂದರಿ ಎಂದೇ ಜನರ ಬಾಯಲ್ಲಿ ಮನೆಮಾತಾದ ಟೊಮೆಟೊ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ ಕೇವಲ 20 ರೂಪಾಯಿಗೆ ಮಾರಾಟ ಆಗುತ್ತಿದೆ. ಕಳೆದ ಎರಡು ತಿಂಗಳಿಂದ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದ ಟೊಮೆಟೊವನ್ನು ಬೆಳೆಯುವ ರೈತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ.

ರಾಜ್ಯದ ಎಲ್ಲ ಮಾರುಕಟ್ಟೆಗೆ ಯಥೇಚ್ಛವಾಗಿ ಟೊಮೆಟೋ ಲೋಡ್ಗಳು ಆಗಮಿಸುತ್ತಿವೆ. ಆದರೆ, ಸ್ಥಳೀಯವಾಗಿ ದೇಶದ ಎಲ್ಲ ಮಾರುಕಟ್ಟೆಗಳಿಗೂ ಟೊಮೆಟೊ ಅವಶ್ಯಕತೆ ಹೆಚ್ಚಾಗಿದ್ದರಿಂದ ಕರ್ನಾಟಕದ ಟೊಮೆಟೊ ಖರೀದಿ ಪ್ರಮಾಣ ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಳೆದ ಟೊಮೆಟೊ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಆಗುತ್ತಿದ್ದು, ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page