ಸಿಎಂ ಭಾಗಿಯಾಗುವ ಕಾರ್ಯಕ್ರಮದಲ್ಲಿ ಅವಘಡ; ಬೆಂಕಿಗೆ ಬಿದ್ದು ಅರ್ಚಕ ಆಸ್ಪತ್ರೆಗೆ ದಾಖಲು

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿರುವ ಮಂಡ್ಯದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ, ಕೆಂಡ ಹಾಯುವಾಗ ಅರ್ಚಕನೊಬ್ಬ ಆಯ ತಪ್ಪಿ ಬಿದ್ದು ಗಂಭೀರ ಗಾಯಗಳಾಗಿವೆ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ದೊಡ್ಡಾಬಾಲ ಗ್ರಾಮದಲ್ಲಿ ಈ ಅವಘಡ ನಡೆದಿದೆ.

ದೊಡ್ಡಬಾಲ ಗ್ರಾಮದ ಹುಚ್ಚಪ್ಪ ದೇವರ ಜಾತ್ರಾ ಮಹೋತ್ಸವ ಹಬ್ಬದ ಹಿನ್ನೆಲೆ ದೇವಾಲಯದ ಮುಂದೆ ಕೊಂಡೋತ್ಸವ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಆಗಮನಕ್ಕೆ ಮುನ್ನವೇ ಅವಘಡ ನಡೆದಿದೆ.

ಕೊಂಡ ಹಾಯುವಾಗ ಅರ್ಚಕ ಗುಡ್ಡಪ್ಪ ಶಿವರಾಮ ಎಂಬುವವನು ಆಯ ತಪ್ಪಿ ಬಿದ್ದು ಗಂಭೀರ ಗಾಯಗಳಾಗಿವೆ. ಬೆಂಕಿ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಸಮೀಪದ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೀರದೇವರುಗಳ ದೊಡ್ಡ ಹಬ್ಬದಲ್ಲಿ ಅವರು ಭಾಗಿಯಾಗಲಿದ್ದಾರೆ. 39 ವರ್ಷಗಳ ನಂತರ 14 ಕೂಟದ ದೇವರುಗಳ ಹಬ್ಬ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ದೊಡ್ಡ ಬಾಲ ಗ್ರಾಮದಲ್ಲಿ ನಡೆಯುತ್ತಿರುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು