Home ರಾಜ್ಯ ಮಂಡ್ಯ 20 ವರ್ಷದ ಯುವತಿಯೊಂದಿಗೆ ಆನ್‌ಲೈನ್‌ ಚಾಟಿಂಗ್;‌ 1.40 ಲಕ್ಷ ಕಳೆದುಕೊಂಡ 60 ವರ್ಷದ ಅರ್ಚಕ!

20 ವರ್ಷದ ಯುವತಿಯೊಂದಿಗೆ ಆನ್‌ಲೈನ್‌ ಚಾಟಿಂಗ್;‌ 1.40 ಲಕ್ಷ ಕಳೆದುಕೊಂಡ 60 ವರ್ಷದ ಅರ್ಚಕ!

0

ಮಂಡ್ಯ: ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ರೊಬ್ಬರು ಯುವತಿಯೊಂದಿಗೆ ಆನ್‌ಲೈನಿನಲ್ಲಿ ಮಾತನಾಡುತ್ತಾ ಅವಳಿಂದ ಹಣ ಕಳೆದುಕೊಂಡು ಸೈಬರ್‌ ಕ್ರೈಮ್‌ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿದ್ದಾರೆ.

ಫೇಸ್​ಬುಕ್​ ಮೂಲಕ ಪರಿಚಯವಾಗಿದ್ದ ಯುವತಿ ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಮೋಡಸ ಮಾಡಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ.

ಮಂಡ್ಯ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದರು. ಅವರಿಗೆ ಇತ್ತೀಚೆಗೆ ಫೇಸ್ಬುಕ್‌ ಮೂಲಕ ಯುವತಿಯೊಬ್ಬಳ ಪರಿಚಯವಾಗಿತ್ತು.

ಈ ನಡುವೆ ಸಿರಿ ಶ್ರೇಷ ಸರಿತಾ ಯುವತಿಯು ಅರ್ಚಕನಿಗೆ ಫೇಸ್ಬುಕ್‌ ಮೂಲಕ ಪರಿಚಿತಳಾಗಿದ್ದಾಳೆ. ನಂತರ ಪರಸ್ಪರ ಸಲುಗೆ ಬೆಳೆದು, ಯುವತಿ ಅರ್ಚಕರ ಹಿನ್ನೆಲೆ ತಿಳಿದುಕೊಂಡು ಅವರಿಂದ ಸ್ವಲ್ಪ ಸ್ವಲ್ಪ ಹಣ ಪೀಕಿದ್ದಾಳೆ. ಹೀಗೆ ಪೀಕಿದ ಒಟ್ಟು ಹಣ 1 ಲಕ್ಷದ 40 ಸಾವಿರ ಎನ್ನಲಾಗಿದೆ. ಈಗ ಹಣ ಕಳೆದುಕೊಂಡು ಹತಾಶನಾಗಿರುವ ಅರ್ಚಕರು ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದಾರೆ.

ಹೀಗೆ ಹಣ ಕೊಟ್ಟ ಅರ್ಚಕ ವಿಜಯಕುಮಾರ್‌ ತನ್ನನ್ನು ಭೇಟಿಯಾಗುವಂತೆ ಯುವತಿಯನ್ನು ಒತ್ತಾಯಿಸಿದ್ದಾರೆ. ಹೀಗೆ ಭೇಟಿಯ ಒತ್ತಾಯ ಹೆಚ್ಚಾಗುತ್ತಿದ್ದ ಹಾಗೆ ಯುವತಿ ವಿಜಯಕುಮಾರ್‌ ಅವರನ್ನು ಬ್ಲಾಕ್‌ ಮಾಡಿ ಹೊರಟು ಹೋಗಿದ್ದಾಳೆ. ಇದರಿಂದ ಬೇಸತ್ತ ವಿಜಯ ಕುಮಾರ್‌ ಈಗ ನನಗೆ ನನ್ನ ಹಣ ಕೊಡಿಸಿ ಎಂದು ಪೊಲೀಸರ ಬೆನ್ನು ಬಿದ್ದಿದ್ದಾರೆ.

You cannot copy content of this page

Exit mobile version