Thursday, January 15, 2026

ಸತ್ಯ | ನ್ಯಾಯ |ಧರ್ಮ

ಭ್ರಷ್ಟಾಚಾರ ಆರೋಪ : ಕ್ಷಮಾದಾನ ಕೋರಿ ಇಸ್ರೇಲ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ಪ್ರಧಾನಿ ಬೆಂಜಮಿನ್ ನೇತಾನ್ಯಹು

ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಸುದೀರ್ಘ ವಿಚಾರಣೆಗಳನ್ನು ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಕ್ಷಮಾದಾನಕ್ಕಾಗಿ ದೇಶದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

‘ಕ್ಷಮಾದಾನದ ಕುರಿತು ದೇಶದಲ್ಲಿ ವಿಭಿನ್ನ ನಿಲುವಿರಬಹುದು. ಕ್ಷಮೆಯು ರಾಷ್ಟ್ರೀಯ ಸಾಮರಸ್ಯವನ್ನು ಮೂಡಿಸುತ್ತದೆ. ಇದರಿಂದ ವಿಚಾರಣೆಯೂ ಅಂತ್ಯಗೊಳ್ಳುತ್ತದೆ ಎಂದು ಪ್ರಧಾನಿ ನೇತಾನ್ಯಹು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಾರಕ್ಕೆ 3 ಬಾರಿ ನ್ಯಾಯಾಲಯದಲ್ಲಿ ಹಾಜರಾಗಬೇಕಾದ ಅವಶ್ಯಕತೆಯು, ದೇಶವನ್ನು ಮುನ್ನಡೆಸುವಲ್ಲಿ ಸವಾಲಾಗಿದೆ’ ಎಂದು ನೆತನ್ಯಾಹು ಹೇಳಿದ್ದಾರೆ. ವಂಚನೆ, ನಂಬಿಕೆ ದ್ರೋಹ, ಲಂಚ ಸ್ವೀಕರಿಸಿದ 3 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page