Tuesday, June 18, 2024

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಶ್ರೀಮಂತ ಉದ್ಯಮಿಗಳ ಕೈಯಲ್ಲಿನ ಸಾಧನ: ರಾಹುಲ್‌ ಗಾಂಧಿ

ಕೋಳಿಕ್ಕೋಡ್: ದೇಶದ ಕೆಲವು ಶ್ರೀಮಂತ ಉದ್ಯಮಿಗಳ ಕೈಯಲ್ಲಿ ಪ್ರಧಾನಿ ಮೋದಿ ಸಾಧನವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಮಂಗಳವಾರ ಕೋಳಿಕ್ಕೋಡ್‌ನ ಕೊಡಿಯಾತ್ತೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅವರು ಮಾತನಾಡಿದ ಅವರು “ದೇಶದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಮತ್ತು ಶ್ರೀಮಂತ ಉದ್ಯಮಿಗಳಿಗೆ ಭದ್ರತೆ ಒದಗಿಸುವುದು ಪ್ರಧಾನಿ ಮೋದಿಯ ಮುಖ್ಯ ಕೆಲಸಗಳಾಗಿವೆ. ಉದ್ಯಮಿಗಳ ಬ್ಯಾಂಕ್‌ ಸಾಲವನ್ನು ಅವರು ಮನ್ನಾ ಮಾಡಿದರು” ಎಂದು ಆರೋಪಿಸಿದರು.

ದೇಶದ ಐದಾರು ಶ್ರೀಮಂತ ಉದ್ಯಮಿಗಳ ಪಾಲಿಗೆ ಮೋದಿ ಒಂದು ಸಾಧನವಾಗಿದ್ದಾರೆ ಎಂದರು. ಈವರೆಗೆ 20-25 ಮಂದಿಗೆ ಸುಮಾರು 16 ಸಾವಿರ ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡಿದ್ದಾರೆ. ದೇಶದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ, ನಿರುದ್ಯೋಗ, ಬೆಲೆ ಏರಿಕೆಯಂತಹ ವಿಚಾರಗಳನ್ನು ಪ್ರಸ್ತಾಪಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಬಾಂಡ್‌ಗಳು ಪ್ರಧಾನಿ ಮೋದಿಯವರಿಗೆ ದೋಚಲು ಸಿಕ್ಕ ಒಂದು ಆಯುಧ, ಇವುಗಳ ಮೂಲಕ ಸಾವಿರಾರು ಕೋಟಿ ದೋಚಲಾಗಿದೆ ಎಂದು ಆರೋಪಿಸಿದರು. ಕೇಂದ್ರದಲ್ಲಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಭಾರತದ ಸಂವಿಧಾನವನ್ನು ಬದಲಾಯಿಸಲು ತೀವ್ರ ಪ್ರಯತ್ನ ನಡೆಸುತ್ತಿವೆ ಎಂದು ಸಹ ದೂರಿದರು.

Related Articles

ಇತ್ತೀಚಿನ ಸುದ್ದಿಗಳು