ಆಗಸ್ಟ್ 2025 ರ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ, ಯಾರು ಪ್ರಧಾನಿ ಆಗುವರು ಎಂಬ ಬಗ್ಗೆ ಫಲಿತಾಂಶ ಹೊರಬಿದ್ದಿದೆ. ಕೇವಲ ಒಂದು ತಿಂಗಳ ಹಿಂದಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಪಕ್ಷದ ಓಟ್ ಚೋರಿ (ಮತಗಳ್ಳತನ) ಬಗ್ಗೆ ದನಿ ಎತ್ತಿ ಸುದ್ದಿ ಆಗಿತ್ತು.
ಲೋಕಸಭಾ ಚುನಾವಣೆ ನಡೆದು ಕೇವಲ ಎರಡು ವರ್ಷಗಳಲ್ಲಿ ಈ ಸಮೀಕ್ಷೆ ಅಗತ್ಯ ಏನಿತ್ತು ಎಂಬ ಪ್ರಶ್ನೆ ಈಗ ಎದುರಾಗಿದೆ. ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಬಗ್ಗೆ ಈ ಹಿಂದಿನಿಂದಲೂ ಅಪಸ್ವರ ಇದ್ದು, ಇದೊಂದು ಬಿಜೆಪಿ ಕೃಪಾಪೋಷಿತ ಸಮೀಕ್ಷೆ ಎಂಬ ನೇರವಾದ ಅಪವಾದವಿದೆ. ಕಳೆದ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಸಹ ಇದೇ ರೀತಿ ಬಿಜೆಪಿ ಬಹುಮತದ ಸಮೀಕ್ಷೆ ಕೊಟ್ಟು, ಫಲಿತಾಂಶ ಬಂದಾಗ ಪೇಚಿಗೆ ಸಿಲುಕಿತ್ತು.
ಸಧ್ಯ ಹೀಗೊಂದು ಸಮೀಕ್ಷೆ ಹಿಂದೆ ಅಪವಾದ ಕೇಳಿ ಬಂದಿದೆ. ಅದರಂತೆ ಜನತೆಯ ಪ್ರಧಾನಿ ಆಯ್ಕೆ ಹಿಂದೆ ಯಾರೇ ಇರಲಿ ಇಲ್ಲದಿರಲಿ. ರಾಹುಲ್ ಗಾಂಧಿ ಎತ್ತಿರುವ ಮತಗಳ್ಳತನದ ಆರೋಪದ ಹಿಂದೆಯೇ ಹೀಗೊಂದು ಸಮೀಕ್ಷೆ, ಅದೂ ಹೊತ್ತಲ್ಲದ ಹೊತ್ತಿನಲ್ಲಿ, ನಿರೀಕ್ಷೆಯೇ ಇಲ್ಲದೇ ಹೊರಬಿದ್ದಿರುವುದು ಮಾತ್ರ ದೊಡ್ಡ ಅಪವಾದಕ್ಕೆ ಎಡೆ ಮಾಡಿದಂತಿದೆ. ಅದರಲ್ಲೂ ಈ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷದವರನ್ನೆ ಮುಖ್ಯ ರೇಸ್ ನಲ್ಲಿ ನಿಲ್ಲುವಂತೆ ಮಾಡಿರುವುದೂ, ಇದೂ ಒಂದು ತೇಪೆ ಹಚ್ಚುವ ಕೆಲಸ ಎಂದು ಮಾತನಾಡಿಕೊಳ್ಳುವಂತಾಗಿದೆ.