Saturday, June 15, 2024

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಲೂಟಿ ತಂತ್ರ vs ಕಾಂಗ್ರೆಸ್ ಲೋಕತಂತ್ರ’:  ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಮಧ್ಯ ಪ್ರದೇಶ: ಪೆಟ್ರೋಲ್‌, ಡಿಸೇಲ್‌, ಮತ್ತು ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಇನ್ನು ಏಕೆ ಕಡಿಮೆಯಾಗಿಲ್ಲ ಎಂದು ಪ್ರಶ್ನಿಸಿ?, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು, ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಧ್ಯ‌ ಪ್ರದೇಶದಲ್ಲಿ ನಡೆದ ಭಾರತ ಐಕ್ಯಾತಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ‘ಲೂಟಿ-ವ್ಯವಸ್ಥೆ’ಯ ವಿರುದ್ಧ ಈಗಾಗಲೇ ಧ್ವನಿ ಎತ್ತಿದ್ದೇವೆ ಅದುವೇ ಭಾರತ ಐಕ್ಯತಾ ಯಾತ್ರೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಭಾರತ ಐಕ್ಯತಾ ಯಾತ್ರೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಇದು ಬಿಜೆಪಿಯ ಲೂಟಿ-ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತರಿವ ಯಾತ್ರೆ ಎಂದು ಬಣ್ಣಿಸಿದರು.

ಇನ್ನು ಮುಂದುವರೆದು ʼನನಗೆ ಉತ್ತರ ಕೋಡಿ!ʼ ಎಂದು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿಯವರು, ಜಾಗತಿಕವಾಗಿ ಎಲ್‌ಪಿಜಿ ಮತ್ತು ಕಚ್ಚಾ ತೈಲ ಬೆಲೆಗಳನ್ನು ಕ್ರಮವಾಗಿ 40% ಮತ್ತು 25% ರಷ್ಡು ಕಡಿತಗೊಳಿಸಲಾಗಿದೆ, ಆದರೆ ಭಾರತದಲ್ಲಿ ಏಕೆ ಬೆಲೆಗಳು ಒಂದೇ ಆಗಿವೆ, 6 ತಿಂಗಳಲ್ಲಿ ಆಂತರಾಷ್ಟ್ರೀಯ ದತ್ತಾಂಶಗಳ ಬೆಲೆ ಅಗ್ಗವಾಗಿದೆ, ಅಂದರೆ ಕಚ್ಚಾತೈಲ 25%, ಎಲ್‌ಪಿಜಿ 40%, ಬೆಲೆ ಕಡಿಮೆಯಾಗಿದೆ. ಆದರೂ ಕೂಡ ಪೆಟ್ರೋಲ್‌, ಡೀಸೆಲ್‌ ಮತ್ತು ಸಿಲಿಂಡರ್‌ಗಳ ಬೆಲೆಗಳು ಏಕೆ ಕಡಿಮೆಯಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್, ತೈಲ ಬೆಲೆಗಳು

ಮೇ 21, 2022 ರಿಂದ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ಆಗಿವೆ. ಶನಿವಾರ, 1 ಲೀಟರ್ ಪೆಟ್ರೋಲ್ ಬೆಲೆ 96.72 ರೂ.ನಲ್ಲಿ ಮುಂದುವರಿದರೆ, 1 ಲೀಟರ್ ಡೀಸೆಲ್ ಬೆಲೆ 89.62 ರೂ. ನೋಯ್ಡಾದಲ್ಲಿ ಪೆಟ್ರೋಲ್ ಬೆಲೆ 96.79 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.96 ರೂ. ಕೋಲ್ಕತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 106.03 ರೂ., ಡೀಸೆಲ್ ಪ್ರತಿ ಲೀಟರ್‌ಗೆ 94.27 ರೂ.ಗೆ ಮಾರಾಟವಾಗುತ್ತಿದೆ. ಮತ್ತೊಂದೆಡೆ, ಪೆಟ್ರೋಲ್ ಪ್ರತಿ ಲೀಟರ್ಗೆ 106.31 ರೂ., ಡೀಸೆಲ್ ಪ್ರತಿ ಲೀಟರ್‌ಗೆ 94.27 ರೂ.ಗೆ ಮಾರಾಟವಾಗುತ್ತಿದೆ. ಹರಿಯಾಣದ ಗುರುಗ್ರಾಮದ ಡೀಸೆಲ್ ಬೆಲೆ 90.05 ರೂ ಮತ್ತು ಪೆಟ್ರೋಲ್ ಬೆಲೆ 97.18 ರೂ. ದೇಶದ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅಂಡಮಾನ್ ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ನಲ್ಲಿ ಮಾರಾಟ ಮಾಡಲಾಗುತ್ತದೆ, ಪೆಟ್ರೋಲ್ ಬೆಲೆ 84.10 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 79.94 ರೂ. ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು