Saturday, July 26, 2025

ಸತ್ಯ | ನ್ಯಾಯ |ಧರ್ಮ

ಪ್ರಿಯಾಂಕ್‌ ಖರ್ಗೆಗೆ ಡೆಂಗ್ಯೂ ಜ್ವರ: ಯಲ್ಲಮ್ಮ ದೇವಿಗೆ ಉರುಳು ಸೇವೆ ಸಲ್ಲಿಸಿದ ಪುರಸಭೆ ಅಧ್ಯಕ್ಷ

ಚಿತ್ತಾಪುರ: ಮಾಜಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಕಾರಣ, ಅವರು ಆದಷ್ಟು ಬೇಗ ಗುಣಮುಖರಾಗಬೇಕೆಂಬ ಉದ್ದೇಶದಿಂದ ಪುರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಕಾಳಗಿಯವರು, ಬುಧವಾರ ಪಟ್ಟಣದ ಶಕ್ತಿದೇವತೆ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನದ ಸುತ್ತಾ ಎರೆಡು ಬಾರಿ ದೀಡ್‌ ನಮಸ್ಕಾರ ಹಾಕಿ, ಉರುಳು ಸೇವೆ ಸಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸದಾ ಜನರ ಮಧ್ಯೆದಲ್ಲಿದ್ದುಕೊಂಡು ಜನಸೇವೆ ಮಾಡುವ ಒಬ್ಬ ಕ್ರಿಯಾಶೀಲ ಹಾಗೂ ಲವಲವಿಕೆಯಿಂದ ಇರುವಂತಹ ಶಾಸಕರು. ಇವರು ಡೆಂಗ್ಯೂ ಜ್ವರ ಬಂದಿರುವ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದು, ಖರ್ಗೆಯವರು ಆದಷ್ಟು ಬೇಗ  ಇದರಿಂದ ಗುಣಮುಖರಾಗಿ ಮತ್ತೆ ಜನ ಸೇವೆ ಮಾಡುವಂತಾಗಲಿ ಎಂದು ನಾಗಾವಿ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಸಂತೋಷ್‌ ಪೂಜಾರಿ, ಲಕ್ಷೀಕಾಂತ ಸಾಲಿ, ಸಂಜಯ್‌ ಬುಳಕರ್‌, ಸೋಮು ಟೋಕಾಪುರ, ಅಹ್ಮದಸೇಠ, ಮತ್ತು ಇತರರು ಇದ್ದರು.   

Related Articles

ಇತ್ತೀಚಿನ ಸುದ್ದಿಗಳು

You cannot copy content of this page