Friday, August 22, 2025

ಸತ್ಯ | ನ್ಯಾಯ |ಧರ್ಮ

ಸುಳ್ಳು ಪ್ರಚಾರವೇ ಮೋದಿ ಗ್ಯಾರಂಟಿ: ಖರ್ಗೆ

ದೆಹಲಿ: ಪ್ರಧಾನಿ ಮೋದಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ಪಕ್ಷವನ್ನು ಟೀಕಿಸುವತ್ತ ಗಮನ ಹರಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಪ್ರಧಾನಿ ಭಾಷಣದ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ದೇಶದಲ್ಲಿ ಹಲವು ಸಮಸ್ಯೆಗಳಿರುವಾಗ ಪ್ರಧಾನಿ ಕಾಂಗ್ರೆಸ್ ಟೀಕೆಗೆ ಸೀಮಿತವಾಗಿದ್ದಾರೆ ಎಂದರು.

ಸಂವಿಧಾನದ ಮೇಲೆ ನಂಬಿಕೆ ಇಲ್ಲದವರೇ ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ಸುಳ್ಳು ಟೀಕೆ ಮಾಡಿದ್ದು, ಸುಳ್ಳು ಪ್ರಚಾರ ಮಾಡುವುದೇ ಮೋದಿ ಗ್ಯಾರಂಟಿ ಎಂದು ಖರ್ಗೆ ದೂರಿದರು. ”ಕೇಂದ್ರ ಸರಕಾರದ ಬಳಿ ಯಾವುದೇ ಮಾಹಿತಿ ಇಲ್ಲ. 2021ರ ಜನಗಣತಿಯನ್ನು ನಡೆಸಲಾಗಿಲ್ಲ. ನಿರುದ್ಯೋಗ ಡೇಟಾ ಇಲ್ಲ. ಆರೋಗ್ಯ ಸಮೀಕ್ಷೆ ಇಲ್ಲ ಎಂದು ಅವರು ಕಿಡಿಕಾರಿದರು.

ಎನ್ ಡಿಎ ಎಂದರೆ ನೋ ಡಾಟಾ ಅವೈಲೇಬಲ್ ಎಂದು ಖರ್ಗೆ ಟೀಕಿಸಿದರು. ಕೇಂದ್ರವು ಎಲ್ಲ ಅಂಕಿ-ಅಂಶಗಳನ್ನು ಮುಚ್ಚಿಟ್ಟು ಸುಳ್ಳು ಪ್ರಚಾರ ಮಾಡುತ್ತಿದೆ ಎಂದರು. ಏತನ್ಮಧ್ಯೆ, ಸಂಸತ್ತಿನಲ್ಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ಮೋದಿ ಸುಳ್ಳುಗಳನ್ನು ಮಾತ್ರವೇ ಹೇಳುತ್ತಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page