Home ದೇಶ ತ್ರಿವೇಣಿ ಸಂಗಮದಲ್ಲಿನ ನೀರು ಕುಡಿದು ನಿಮ್ಮ ಮಾತನ್ನು ಸಾಬೀತು ಮಾಡಿ: ಮುಖ್ಯಮಂತ್ರಿ ಯೋಗಿಗೆ ಬಾಲಿವುಡ್‌ ಗಾಯಕನ...

ತ್ರಿವೇಣಿ ಸಂಗಮದಲ್ಲಿನ ನೀರು ಕುಡಿದು ನಿಮ್ಮ ಮಾತನ್ನು ಸಾಬೀತು ಮಾಡಿ: ಮುಖ್ಯಮಂತ್ರಿ ಯೋಗಿಗೆ ಬಾಲಿವುಡ್‌ ಗಾಯಕನ ಸವಾಲ್

0

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಈ ನೀರಿನಲ್ಲಿ ಪ್ರಾಣಿಗಳ ಮಲದಲ್ಲಿರುವ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿತ್ತು.

ಆದರೆ ಇದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯೆ ನೀಡಿ “ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ ಆಚಮನಕ್ಕೂ ಯೋಗ್ಯವಾಗಿದೆ” ಎಂದು ಹೇಳಿಕೊಂಡಿದ್ದರು

ಇದೀಗ ಈ ಹೇಳಿಕೆ ಬೆನ್ನಲ್ಲೇ ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ದದ್ಲಾನಿ ಯೋಗಿ ಆದಿತ್ಯನಾಥ್ ಗೆ ಸವಾಲೊಂದನ್ನು ಹಾಕಿದ್ದಾರೆ.

ತ್ರಿವೇಣಿ ಸಂಗಮದ ನೀರಿನಲ್ಲಿ ಬ್ಯಾಕ್ಟಿರಿಯಾ ಇಲ್ಲ ಇದು ಕುಡಿಯಲು ಯೋಗ್ಯವಾಗಿದೆ ಎಂದು ಹೇಳಿದ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಗಾಯಕ ವಿಶಾಲ್ ದದ್ಲಾನಿ ಸೋಷಿಯಲ್‌ ಮೀಡಿಯಾ ಪೋಸ್ಟ್ ಮೂಲಕ ನಯವಾಗಿಯೇ ಸವಾಲು ಹಾಕಿದ್ದು ‘ಸರ್, ದ್ವೇಷಿಸುವವರ ಬಗ್ಗೆ ಚಿಂತಿಸಬೇಡಿ. ನಾವು ನಿಮ್ಮನ್ನು ನಂಬುತ್ತೇವೆ, ದಯವಿಟ್ಟು ತ್ರಿವೇಣಿ ಸಂಗಮಕ್ಕೆ ತೆರಳಿ ಅಲ್ಲಿ ಕ್ಯಾಮೆರಾದ ಮುಂದೆ ಸಂಗಮದ ನೀರನ್ನು ಕುಡಿದು ಜನರಿಗೆ ತೋರಿಸಿ‌ʼ ಎಂದು ಸವಾಲು ಹಾಕಿದ್ದಾರೆ.

You cannot copy content of this page

Exit mobile version