ಮೈಸೂರು: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಧಿಕಾರಿಗಳು ಹಣ ಕೇಳಿದ್ದಾರೆ ಎನ್ನುವ ವರದಿಯನ್ನು ಪಂಡಿತ್ ರಾಜೀವ ತಾರಾನಾಥ ಅವರು ನಿರಾಕರಿಸಿದ್ದಾರೆ.
ಮೈಸೂರಿನ ಪತ್ರಿಕೆಯೊಂದು ವಿಶೇಷ ವರದಿಯಲ್ಲಿ ಅಧಿಕಾರಿಗಳು ಸಂಭಾವನೆಯನ್ನು ಮೂರು ಲಕ್ಷ ಹೆಚ್ಚಿಸಿ ನಂತರ ಅದನ್ನು ನಮಗೆ ವಾಪಸ್ ಮಾಡಿ ಎಂದು ಕೇಳಿದ್ದರು ಎಂದು ಪಂ. ರಾಜೀವ ತಾರಾನಾಥ ಅವರ ಹೇಳಿಕೆಯೊಂದಿಗೆ ಪ್ರಕಟಿಸಿತ್ತು.
ನಂತರ ಇದರಿಂದ ಎಚ್ಚೆತ್ತ ದಸರಾ ಸಮಿತಿ ಅಧಿಕಾರಿಯೊಬ್ಬರು ಅವರ ಬಳಿ ಧಾವಿಸಿ ಈ ಬಗ್ಗೆ ವಿಚಾರಿಸಿದ್ದಾರೆ.
ಆಗ ಅವರು ತನಗೆ ಆರೋಗ್ಯ ಸರಿಯಿಲ್ಲದಿರುವ ಕಾರಣಕ್ಕೆ ಕಾರ್ಯಕ್ರಮ ನಿರಾಕರಿಸಿದ್ದೆ ಹೊರತು ತನ್ನ ಬಳಿ ಯಾರೂ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳು ಪಂ. ರಾಜೀವ ತಾರಾನಾಥ ಅವರ ಬಳಿ ಕಾರ್ಯಕ್ರಮ ನೀಡುವಂತೆ ವಿನಂತಿ ಮಾಡಿಕೊಂಡರು. ಅದಕ್ಕೆ ಅವರು ತಾನು ಕಾರ್ಯಕ್ರಮ ನೀಡುವುದಕ್ಕಿರುವ ಶರತ್ತುಗಳನ್ನು ವಿವರಿಸಿದರು.
ಅವರು ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ಪೀಪಲ್ ಟಿವಿಗೆ ಲಭ್ಯವಾಗಿದ್ದು ಅದನ್ನು ಈ ಲಿಂಕ್ ಬಳಸಿ ನೋಡಬಹುದು.
https://fb.watch/nG64Xa-dwd/?mibextid=b5TES3
ಈ ಕುರಿತು ಇಂದು ಬೆಳಗ್ಗೆ ಪ್ರತಿಕ್ರಿಯಿಸಿದ್ದ ಮೈಸೂರು ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಒಂದು ವೇಳೆ ಭ್ರಷ್ಟಾಚಾರ ನಡೆದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ವೀಟ್ ಮಾಡಿದ್ದರು.
https://twitter.com/CMahadevappa/status/1713072711759737137?t=IS7EMZ3eDSiqgrFuxYJeAg&s=19
ಈ ದಿನ ಬೆಳಗ್ಗೆ ಈ ಕುರಿತು ಪೀಪಲ್ ಮೀಡಿಯಾ ಕೂಡಾ ವರದಿ ಮಾಡಿತ್ತು. ಈ ಕುರಿತು ನಾವು ವಿಷಾದಿಸುತ್ತೇವೆ.