Saturday, June 29, 2024

ಸತ್ಯ | ನ್ಯಾಯ |ಧರ್ಮ

ಹಿಂದಿ ಹೇರಿಕೆ ವಿರುದ್ಧ ನವೆಂಬರ್ 4 ರಂದು ತಮಿಳುನಾಡಿನಾದ್ಯಂತ ಸಾರ್ವಜನಿಕ ಸಭೆ

ಚೆನ್ನೈ: ರಾಜ್ಯದಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಚರ್ಚಿಸಲು ಮತ್ತು ವಿವರಿಸಲು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನವೆಂಬರ್ 4 ರಂದು ರಾಜ್ಯಾದ್ಯಂತ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ, ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ವರದಿಯ ಶಿಫಾರಸುಗಳನ್ನು ಜಾರಿಗೆ ತರದಂತೆ ಕೇಂದ್ರವನ್ನು ಒತ್ತಾಯಿಸಿದ ಹಿಂದಿ ಭಾಷೆ ಹೇರಿಕೆಯ ವಿರುದ್ಧ , ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಸ್ಪೀಕರ್‌ಗಳು ವಿವರಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಅಕ್ಟೋಬರ್ 13 ರಂದು ಆಡಳಿತಾರೂಢ ಡಿಎಂಕೆಯ ಯುವ ಮತ್ತು ವಿದ್ಯಾರ್ಥಿ ಘಟಕವು ಕೇಂದ್ರದ ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಘೋಷಿಸಿತು. ಇದಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಕೇಂದ್ರವನ್ನು ಖಂಡಿಸಿದರು. ಸ್ಟಾಲಿನ್ ಅವರು ತಮ್ಮ ಹೇಳಿಕೆಯಲ್ಲಿ, ʼಹಿಂದಿ ಹೇರಿಕೆʼ ವಿರುದ್ಧ ಇತಿಹಾಸದಲ್ಲಿ ಮಾಡಿದ ಯುವಕರ ತ್ಯಾಗವನ್ನು ಪಟ್ಟಿ ಮಾಡಿದ್ದರು ಮತ್ತು ʼನಮ್ಮ ಮೇಲೆ ಮತ್ತೊಂದು ಭಾಷಾ ಯುದ್ಧವನ್ನು ಹೇರಬಾರದುʼ ಎಂದು ಸ್ಟಾಲಿನ್ ಹೇಳಿದ್ದರು.

ಅಕ್ಟೋಬರ್ 10 ರಂದು, ಸ್ಟಾಲಿನ್ ಅವರು, ʼಭಾರತದ ವೈವಿಧ್ಯತೆಯನ್ನು ನಿರಾಕರಿಸುವ ಹಿಂದಿ ಹೇರಿಕೆಗಾಗಿ ಕೇಂದ್ರ ಬಿಜೆಪಿ ಸರ್ಕಾರದ ಕಠಿಣ ಒತ್ತಡವು ಆತಂಕಕಾರಿ ವೇಗದಲ್ಲಿ ನಡೆಯುತ್ತಿದೆ. ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ವರದಿಯ 11 ನೇ ಸಂಪುಟದಲ್ಲಿ ಮಾಡಲಾದ ಪ್ರಸ್ತಾಪಗಳು ಭಾರತದ ಆತ್ಮದ ಮೇಲೆ ಮಾಡುತ್ತಿರುವ ನೇರ ದಾಳಿ ಎಂದು ಟ್ವೀಟ್‌ ಮಾಡಿದ್ದರು.

ಹಿಂದಿ ಹೇರಿಕೆ ʼಅನುಷ್ಠಾನಗೊಂಡರೆ, ಹಿಂದಿಯೇತರ ಜನಸಂಖ್ಯೆಯನ್ನು ಅವರ ಸ್ವಂತ ನೆಲದಲ್ಲಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತದೆ. ಹಿಂದಿಯನ್ನು ಹೇರುವುದು ಭಾರತದ ಅಖಂಡತೆಗೆ ವಿರುದ್ಧವಾಗಿದೆ. ಹೀಗಾಗಿ ಬಿಜೆಪಿ ಸರ್ಕಾರವು ಹಿಂದಿ ವಿರೋಧಿ ಆಂದೋಲನಗಳಿಂದ ಪಾಠ ಕಲಿಯುವುದು ಒಳ್ಳೆಯದು ಎಂದು ಸ್ಟಾಲಿನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು