Thursday, June 13, 2024

ಸತ್ಯ | ನ್ಯಾಯ |ಧರ್ಮ

ನೇರವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಸರಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ – ಪುನೀತ್‌ ಕರೆಹಳ್ಳಿ

ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧಿತನಾಗಿ ಬಿಡುಗಡೆಯಾಗಿರುವ ಪುನೀತ್‌ ಕೆರೆಹಳ್ಳಿ ಜೈಲಿನಿಂದ ಹೊರಬಂದ ನಂತರ ಮೊದಲಬಾರಿಗೆ ಸುದ್ದಿಗೋಷ್ಟಿ ನಡೆಸಿದ್ದು, ತನ್ನ ವಿರುದ್ಧ ಸು‍ಳ್ಳು ಆರೋಪಗಳನ್ನು ಹೊರಿಸಿರುವ ಸರ್ಕಾರ ನನ್ನ ಬಳಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ರಾಜ್ಯಾದಂತ ಈ ಕುರಿತು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ತನ್ನ ವಿರುದ್ಧ ಗೂಂಡಾ ಕಾಯ್ದೆ ಅನ್ವಯಿಸುವಲ್ಲಿ ಮಂತ್ರಿ ಜಮೀರ್‌ ಅಹ್ಮದ್‌ ಅವರ ಕೈವಾಡವಿದೆಯೆಂದೂ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪುನೀತ್‌, ನನ್ನ ವಿರುದ್ಧ ಸುಖಾಸುಮ್ಮನೆ ಆರೋಪಗಳನ್ನು ಮಾಡಿದ್ದಾರೆ. ಸು‍ಳ್ಳು ಆರೋಪಗಳನ್ನು ಸೃಷ್ಟಿಸಿದ್ದಾರೆ, ನನ್ನ ಕುರಿತು ಮಾಡಿರುವ ಸು‍‍ಳ್ಳು ಆರೋಪಗಳಿಗೆ ಸಾಕ್ಷಿಯಿರುವುದಾಗಿ ತನ್ನ ಬಳಿಯಿರುವ ಪೆನ್‌ ಡ್ರೈವ್‌ ತೋರಿಸಿದರು.

ಜೈಲಿನಿಂದ ಬಿಡುಗಡೆ ಹೊಂದಿದ ನಂತರರ ಪುನೀತ್​ ಕೆರೆಹಳ್ಳಿ ಸುದ್ದಿಗೋಷ್ಠಿ ಮಾಡಿದ್ದು, ಚಿಕ್ಕವಯಸ್ಸಿನಿಂದಲೇ ಅಪರಾಧ ಚಟುವಟಿಕೆ ನಡೆಸಿದ ಆರೋಪ ಮಾಡಿದ್ದಾರೆ. ನನ್ನ ಮೇಲೆ ಏನೆಲ್ಲಾ ಆರೋಪ ಮಾಡಿದ್ದಾರೆ ಎಲ್ಲಕ್ಕೂ ಸಾಕ್ಷಿ ಕೊಡ್ಬೇಕು ಎಂದು ಹೇಳಿದ್ದಾರೆ.

ಹಿಂದೂ ಕಾರ್ಯಕರ್ತರನ್ನು ಸರ್ಕಾರ ಟಾರ್ಗೆಟ್‌ ಮಾಡುತ್ತಿದೆ. ನಾನು ಮಾರಾಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿರುವುದಾಗಿ ಹೇಳಿದ್ದಾರೆ. ಇದೆಲ್ಲದಕ್ಕೂ ಸಾಕ್ಷ್ಯ ನೀಡಬೇಕು, ಇಲ್ಲದೆ ಹೋದರೆ ಸರ್ಕಾರ ವಿರುದ್ಧ ಮಾನಹಾನಿ ಪ್ರಕರಣಹೂಢುವುದಾಗಿ ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು