Wednesday, July 2, 2025

ಸತ್ಯ | ನ್ಯಾಯ |ಧರ್ಮ

ಸೀರೆ ಉಟ್ಕೊಂಡು ಫುಲ್‌ ಮಿಂಚ್ತಿದ್ದಾರೆ ಅಲ್ಲು ಅರ್ಜುನ್:‌ ಪುಷ್ಪ 2 ಟೀಸರ್‌ ನೋಡಿದ್ರಾ ನೀವು?

ಪುಷ್ಪ ಸಿನೆಮಾದ ಒಂದನೇ ಭಾಗದ ಗುಂಗಿನಿಂದ ಹೊರಬಾರದ ಅಭಿಮಾನಿಗಳಿಗೆ ಅಲ್ಲು ಅರ್ಜುನ್‌ ಭರ್ಜರಿ ರಸದೌತಣ ನೀಡಲು ಪುಷ್ಪ2 ಜೊತೆ ಬಂದಿದ್ದಾರೆ.

ಇಂದು ಬಿಡುಗಡೆಯಾಗಿರುವ ಟೀಸರಿನಲ್ಲಿ ಅಲ್ಲು ಅರ್ಜುನ್‌ ಸೀರೆಯುಟ್ಟು ಶಕ್ತಿ ದೇವತೆಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್‌ ಸೀರೆಯುಟ್ಟಿದ್ದ ಪೋಸ್ಟರ್‌ ಬಿಡುಗಡೆಯಾಗಿತ್ತು. ಈಗ ಅದೇ ಉಡುಪಿನಲ್ಲಿ ಅವರು ಫೈಟ್‌ ಮಾಡುತ್ತಿರುವುದನ್ನು ಟೀಸರಿನಲ್ಲಿ ಕಾಣಬಹುದಾಗಿದೆ.

ಆದರೆ ಅಭಿಮಾನಿಗಳಿಗೆ ಚಿತ್ರತಂಡ ನೀಡಿರುವ ಟೀಸರ್‌ ತೃಪ್ತಿ ತಂದಿಲ್ಲ. ಇನ್ನಷ್ಟು ಸೀನ್‌ ಇದ್ದಿದ್ದರೆ ಕಣ್ತುಂಬಿಕೊಳ್ಳಬಹುದಿತ್ತು ಎನ್ನುತ್ತಿದ್ದಾರೆ.

ಮೊದಲ ಭಾಗಕ್ಕೆ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಈಗ ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್‌ ಇನ್ನಷ್ಟು ಒಳ್ಳೆಯ ಪರ್ಫಾಮೆನ್ಸ್‌ ನೀಡಿರಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ.

‘ಪುಷ್ಪ 2’ ಚಿತ್ರವನ್ನು ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಪಾರ್ಟ್​ಗೆ ಹೋಲಿಕೆ ಮಾಡಿದರೆ ಎರಡನೇ ಪಾರ್ಟ್​ನಲ್ಲಿ ಅವರು ಮತ್ತಷ್ಟು ಪಳಗಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮೊದಲಾದವರು ‘ಪುಷ್ಪ 2’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ಬಗ್ಗೆ ಇರೋ ನಿರೀಕ್ಷೆ ದುಪ್ಪಟ್ಟಾಗಿದೆ. ಆಗಸ್ಟ್ 15ರಂದು ಸಿನಿಮಾ ತೆರೆಗೆ ಬರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page