Tuesday, October 7, 2025

ಸತ್ಯ | ನ್ಯಾಯ |ಧರ್ಮ

ಪುಷ್ಪ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಿಸುತ್ತಿದ್ದವರು ಪೊಲೀಸರ ವಶಕ್ಕೆ

ನೆಲಮಂಗಲ: ಪುಷ್ಪ ಸಿನಿಮಾ ಶೈಲಿಯಲ್ಲಿಯೇ ರೆಡ್‌ ಸ್ಯಾಂಡಲ್‌ವುಡ್  ಸಾಗಿಸುತ್ತಿದ್ದ ನಾಲ್ವರನ್ನು ಬೆಂಗಳೂರಿನ ಜಾಲಹಳ್ಳಿ ಪಶ್ಚಿಮ ವಿಭಾಗ ಜಾರಕಬಂಡೆ ಉಪ ಅರಣ್ಯ ಸಂಚಾರಿ ದಳ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.

ಬಂದಧಿತ ಆರೋಪಿಗಳು ನವೀನ್ ಕುಮಾರ್ ಕೆ(30) ಚೇತನ್ ಎಂ.ಎಸ್(20) ನಜೀಬ್ ಕಾಶಿಫ್ ಪಾಷ್(30), ನಜೀಬ್ ಖಾನ್(26) ಎಂಬುದು ತಿಳಿದು ಬಂದಿದೆ.

ಬಂಧಿತರಿಂದ ಸುಮಾರು 527 ಕೆಜಿ ತೂಕದ 80 ಲಕ್ಷಕ್ಕೂ ಅಧಿಕ ಮೌಲ್ಯದ ರಕ್ತ ಚಂದನ, 2 ಲಾಂಗು ಹಾಗು ಪೆಪ್ಪರ್ ಸ್ಪ್ರೇ‌ ಅನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿಯು ಸುದ್ದಿ ಮೂಲಗಳಿಂದ ಲಭ್ಯವಾಗಿದೆ.

ಈ ಹಿಂದೆಯು ಕೂಡ ಬೆಳಗಾವಿ ಜಿಲ್ಲೆಯಲ್ಲಿ ಇದೇ ರೀತಿಯಲ್ಲಿ ಪುಷ್ಪ ಚಲನಚಿತ್ರದ ಮಾದರಿಯಲ್ಲಿ ಪೊಲೀಸರನ್ನ ಯಾಮಾರಿಸಿ  ರಕ್ತ ಚಂದನ ಸಾಗಿಸುತ್ತಿದ್ದ ಕಳ್ಳನನ್ನ ಮಹಾರಾಷ್ಟ್ರ ಪೊಲೀಸರು ಭರ್ಜರಿ ಬೇಟೆಯಾಡಿ ಕೋಟ್ಯಾಂತರ ರೂ ಮೌಲ್ಯದ ರಕ್ತ ಚಂದನವನ್ನು ವಶಕ್ಕೆ ಪಡೆದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page