Home ರಾಜ್ಯ ಆತ್ಮಸಾಕ್ಷಿ ಇದ್ದರೆ ಈ ಕೂಡಲೇ ಮುಡಾ ಹಗರಣವನ್ನ ಸಿಬಿಐ ತನಿಖೆಗೆ ಒಪ್ಪಿಸಿ: ಆರ್‌ ಅಶೋಕ

ಆತ್ಮಸಾಕ್ಷಿ ಇದ್ದರೆ ಈ ಕೂಡಲೇ ಮುಡಾ ಹಗರಣವನ್ನ ಸಿಬಿಐ ತನಿಖೆಗೆ ಒಪ್ಪಿಸಿ: ಆರ್‌ ಅಶೋಕ

0

ಬೆಂಗಳೂರು: ಮುಡಾ ಸೈಟ್‌ ವಿವಾದದ ಬಿಸಿಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗುತ್ತಿದ್ದು, ವಿಪಕ್ಷ ನಾಯಕ ಆರ್‌ ಅಶೋಕ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಆರ್‌ ಅಶೋಕ “₹4,000 ಕೋಟಿ ಮೌಲ್ಯದ ಮುಡಾ ಭೂಹಗರಣ ಸಿಎಂ ಸಿದ್ಧರಾಮಯ್ಯನವರ ಕುತ್ತಿಗೆಗೆ ಬರುತ್ತಿದ್ದಂತೆ ಸಾಕ್ಷಿ ನಾಶ ಮಾಡುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿವೆ” ಎಂದು ಆರೋಪಿಸಿದ್ದಾರೆ.

ನಗರಾಭಿವೃದ್ದಿ ಸಚಿವರು ಕಡತಗಳನ್ನು ಬೆಂಗಳೂರಿಗೆ ತರುತ್ತಾರೆ. ಹಗರಣದ ಬಗ್ಗೆ ಪದೇ ಪದೇ ಪತ್ರ ಬರೆದಿದ್ದ ಡಿಸಿ ಎತ್ತಂಗಡಿ ಆಗುತ್ತಾರೆ. ನೂರಕ್ಕೂ ಹೆಚ್ಚು ಕಡತಗಳು ನಾಪತ್ತೆಯಾಗಿವೆ ಎಂದೂ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದುವರೆದು “ಸಿದ್ಧರಾಮಯ್ಯನವರೇ ನಿಮಗೆ ಕಿಂಚಿತ್ತಾದರೂ ಪ್ರಾಮಾಣಿಕತೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಈ ಕೂಡಲೇ ಮುಡಾ ಹಗರಣವನ್ನ ಸಿಬಿಐ ತನಿಖೆಗೆ ಒಪ್ಪಿಸಿ. ತಾವು ತಪ್ಪು ಮಾಡಿಲ್ಲವೆಂದಮೇಲೆ ಸಿಬಿಐಗೆ ನೀಡಲು ಭಯವೇಕೆ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

You cannot copy content of this page

Exit mobile version