Thursday, August 21, 2025

ಸತ್ಯ | ನ್ಯಾಯ |ಧರ್ಮ

ದರ್ಶನ್‌ ಹೊಸಚಿತ್ರ | ಡೆವಿಲ್ ಎದುರು ಏಂಜೆಲ್‌ ಆಗಿ ಮಿಂಚಲಿದ್ದಾರೆ ಕರಾವಳಿ ಬೆಡಗಿ ರಚನಾ ರೈ

ಕಾಟೇರಾ ಚಿತ್ರದ ಯಶಸ್ಸಿನಲ್ಲಿ ಮುಳುಗೇಳುತ್ತಿರುವ ಚಿತ್ರನಟ ಚಾಲೆಂಜಿಂಗ್‌ ದರ್ಶನ್‌ ಅವರ ಹೊಸ ಚಿತ್ರದ ಕುರಿತು ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ.

ಹೊಸ ಚಿತ್ರ ಕಳೆದ ನವೆಂಬರ್‌ ತಿಂಗಳಿನಲ್ಲೇ ಅನೌನ್ಸ್‌ ಆಗಿತ್ತಾದರೂ ಇದರ ನಾಯಕಿ ಯಾರು ಎನ್ನುವ ಚರ್ಚೆ ಅಭಿಮಾನಿಗಳ ನಡುವೆ ನಡೆದೇ ಇತ್ತು. ಈಗ ಚಿತ್ರತಂಡ ಅಭಿಮಾನಿಗಳ ಕುತೂಹಲಕ್ಕೆ ತೆರೆಯೆಳೆದಿದ್ದು ಕರಾವಳಿಯ ಬೆಡಗಿ ರಚನಾ ಅವರನ್ನು ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಹೇಳಿದೆ.

ಕರಾವಳಿ ಮೂಲದ ರಚನಾ ಈಗಾಗಲೇ ಸರ್ಕಸ್‌ ಎನ್ನುವ ತುಳು ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರೂಪೇಶ್‌ ಶೆಟ್ಟಿ ನಾಯಕರಾಗಿದ್ದರು. ಭರತ ನಾಟ್ಯ ಕಲಾವಿದೆಯಾಗಿರುವ ರಚನಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಸಕ್ರಿಯರಾಗಿರುವ ರಚನಾ ಅವರಿಗೆ ಈಗ ಒಂದರ ಹಿಂದೆ ಒಂದರಂತೆ ಚಿತ್ರಗಳ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರರಂಗಳಲ್ಲಿ ಸದ್ದು ಮಾಡುತ್ತಿರುವ ಬಂಟ ಸಮುದಾಯದ ಸುಂದರಿಯರ ಲಿಸ್ಟಿಗೆ ಈಗ ರಚನಾ ಕೂಡಾ ಸೇರಿಕೊಂಡಂತಾಗಿದೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಕುರಿತು ಈಗಾಗಲೇ ಅಭಿಮಾನಿಗಳ ನಿರೀಕ್ಷೆ ಮುಗಿಲು ಮುಟ್ಟಿದೆ. ಈ ಹಿಂದೆ ದರ್ಶನ್‌ ಅವರ ತಾರಕ್‌ ಚಿತ್ರವನ್ನು ನಿರ್ದೇಶಿಸಿದ್ದ ಪ್ರಕಾಶ್ ವೀರ್ ‘ಡೆವಿಲ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದೇ ವರ್ಷದ ಜೂನ್‌ ತಿಂಗಳ 20ನೇ ತಾರೀಖು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page