Wednesday, July 10, 2024

ಸತ್ಯ | ನ್ಯಾಯ |ಧರ್ಮ

ರಾಹುಲ್ ಗಾಂಧಿ ‘ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ: 46ನೇ ಶಂಕರಾಚಾರ್ಯ

ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ – ಸ್ವಾಮಿ ವಿಮುಕ್ತೇಶ್ವರಾನಂದ – “ಹಿಂಸಾಚಾರ ಮಾಡುವವರು ಹಿಂದೂಗಳಲ್ಲ” ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ಬಿಜೆಪಿ ಸೇರಿದಂತೆ ಇತರರ ಆಕ್ಷೇಪಗಳ ವಿರುದ್ಧ ಮಾತನಾಡಿದ್ದಾರೆ.

ಜುಲೈ 1ರಂದು ಸಂಸತ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ಶಿವ, ಗುರುನಾನಕ್ ಮತ್ತು ಯೇಸುಕ್ರಿಸ್ತರ ಚಿತ್ರಗಳನ್ನು ಹಿಡಿದು ಹಿಂದೂ ಧರ್ಮ, ಇಸ್ಲಾಂ, ಸಿಖ್ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಬೌದ್ಧ ಧರ್ಮವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು.

ಸಭಾಧ್ಯಕ್ಷರು ಚಿತ್ರ ತೋರಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಅವರು “ಎಲ್ಲಾ ಪ್ರಮುಖ ಧರ್ಮಗಳು ಮತ್ತು ಮಹಾನ್ ಪುರುಷರು “ಡರೋ ಮತ್, ಡರಾವೋ ಮತ್ (ಹೆದರಬೇಡಿ, ಇತರರನ್ನು ಹೆದರಿಸಬೇಡಿ)” ಎಂದು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದ್ದರು.

ಇದೆಲ್ಲದರ ನಡುವೆಯೂ ರಾಹುಲ್ ಗಾಂಧಿ ಪ್ರದರ್ಶಿಸುತ್ತಿದ್ದ ಚಿತ್ರಗಳ ವಿರುದ್ಧ ಎದ್ದುನಿಂತ ಬಿಜೆಪಿ ಸದಸ್ಯರಿಂದಾಗಿ ಸದನ ಪ್ರತಿಭಟನೆ ಮತ್ತು ಗದ್ದಲದ ದೃಶ್ಯಗಳಿಗೆ ಸಾಕ್ಷಿಯಾಯಿತು. ಆದರೆ ವಿಪಕ್ಷ ನಾಯಕರಾದ ರಾಹುಲ್‌ ಮುಂದುವರೆದು ಮಾತನಾಡುತ್ತಾ:

“ಆಪ್ ಹಿಂದೂ ಹೋ ಹೀ ನಹೀ (ನೀವು ಹಿಂದೂಗಳೇ ಅಲ್ಲ) ಹಿಂದೂ ಧರ್ಮವೆಂದರೆ ಸತ್ಯದ ಜೊತೆ ನಿಲ್ಲುವುದು ಮತ್ತು ಆ ಧರ್ಮವನ್ನು ಪಾಲಿಸುವವರು ಸತ್ಯದಿಂದ ಹಿಂದೆ ಸರಿಯಬಾರದು ಅಥವಾ ಸತ್ಯಕ್ಕೆ ಹೆದರಬಾರದು ಎಂದು ಸ್ಪಷ್ಟವಾಗಿ ಬರೆಯಲಾಗಿದೆ” ಎಂದಿದ್ದರು.

ಆದರೆ ಬಿಜೆಪಿ ರಾಹುಲ್‌ ಮಾತುಗಳಿಂದ ಹಿಂದೂಗಳಿಗೆ ಅವಮಾನವಾಗಿದೆ ಎಂದು ಪ್ರತಿಪಾದಿಸಿ ಪ್ರತಿಭಟಿಸಿತ್ತು.

ಆದರೆ, ‘ಶಂಕರಾಚಾರ್ಯ’ ಎಂಬ ಧಾರ್ಮಿಕ ಬಿರುದು ಹೊಂದಿರುವ ಸ್ವಾಮಿ, ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, “ರಾಹುಲ್ ಗಾಂಧಿ ಅವರ ಸಂಪೂರ್ಣ ಭಾಷಣವನ್ನು ನಾವು ಕೇಳಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಹಿಂಸೆಗೆ ಸ್ಥಳವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ರಾಹುಲ್. ಗಾಂಧಿ ಎಲ್ಲಿಯೂ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಏನನ್ನೂ ಹೇಳಿಲ್ಲ” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ 46ನೇ ಶಂಕರಾಚಾರ್ಯ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತುಂಡರಿಸಿ ಹರಡುವುದು ಅಪರಾಧ ಎಂದು ಎಚ್ಚರಿಸಿದ್ದಾರೆ.

“ರಾಹುಲ್ ಎಂದಿಗೂ ಹಿಂದೂಗಳ ವಿರುದ್ಧ ಮಾತನಾಡಲು ಸಾಧ್ಯವಿಲ್ಲ, ಅವರ ಹೇಳಿಕೆಗಳು ಬಿಜೆಪಿ ಮತ್ತು ಅದರ ನಾಯಕರನ್ನು ಉದ್ದೇಶಿಸಿವೆ” ಎಂದು ಅವರು ತಮ್ಮ ವಿಡಿಯೋದಲ್ಲಿ ನೋಡುಗರನ್ನು ಉದ್ದೇಶಿಸಿ ಹೇಳಿದ್ದಾರೆ.

ಜುಲೈ 1 ರಂದು ರಾಹುಲ್ ಗಾಂಧಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ “ಇದು ಬಹಳ ಗಂಭೀರ ವಿಷಯ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕರು ಎಂದು ಕರೆಯುವುದು ಗಂಭೀರ ವಿಷಯ” ಎಂದು ಹೇಳಿದ್ದರು.

ಅದರ ನಂತರವೂ ಬಲಪಂತೀಯ ಸಂಘಟನೆಗಳು ರಾಹುಲ್‌ ಅವರ ವಿರುದ್ಧ ಪ್ರತಿಭಟನೆಗೆ ಇಳಿದದಿದ್ದರು. ಶಾಸಕನೊಬ್ಬ ರಾಹುಲ್‌ ಗಾಂಧಿಯವರನ್ನು ಸಂಸತ್ತಿನಲ್ಲಿ ಕೂಡಿ ಹಾಕಿ ಹೊಡೆಯಬೇಕು ಎಂದೂ ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು