Monday, June 17, 2024

ಸತ್ಯ | ನ್ಯಾಯ |ಧರ್ಮ

ರಾಹುಲ್ ಗಾಂಧಿ ಗುಜರಾತಿ ವಿರೋಧಿ: ಜೆಪಿ ನಡ್ಡಾ ಟೀಕೆ

ಸೂರತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತಿ ವಿರೋಧಿ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಬುಧವಾರ ಟೀಕಿಸಿದ್ದಾರೆ.

ಅಣೆಕಟ್ಟೆನಿಂದಾಗಿ ಸ್ಥಳೀಯರನ್ನು ಸ್ಥಳಾಂತರಿಸುವುದನ್ನು ತಡೆಯಲು ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಶನಿವಾರ ಮಹಾರಾಷ್ಟ್ರದಲ್ಲಿ ನಡೆದ ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡ ಹಿನ್ನೆಲೆಯಲ್ಲಿ ನಡ್ಡಾ ಅವರ ಹೇಳಿಕೆ ಬಂದಿದೆ ಎನ್ನಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನಡ್ಡಾರವರು, ʼಈ ಬಾರಿ ಗುಜರಾತ್ ದಾಖಲೆಗಳನ್ನು ಮುರಿಯುತ್ತದೆ ಎಂದು ನಾನು ನಂಬುತ್ತೇನೆ. ಗುಜರಾತ್ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿ ಹೊರಹೊಮ್ಮಿದೆ. ಇದಕ್ಕಾಗಿಯೇ ಜನರು ಮತ್ತೆ ನಮಗೆ ಮತ ಹಾಕುತ್ತಾರೆ. ಮೇಧಾ ಪಾಟ್ಕರ್ ಯಾವಾಗಲೂ ಅಭಿವೃದ್ಧಿ ವಿರೋಧಿ ನಿಲುವನ್ನು ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ನಿಂತಿರುವುದು ಎಂದರೆ ಅವರು ಗುಜರಾತಿ ವಿರೋಧಿಯೂ ಹೌದು ಎಂದರ್ಥ ಎಂದು ವ್ಯಂಗಿಸಿದ್ದಾರೆ.

ಜೈಲಿನಲ್ಲಿರುವ ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದರ್ ಜೈನ್ ಅವರ ವಿವಾದದ ಬಗ್ಗೆ ಕೇಳಿದಾಗ ಉತ್ತರಿಸದ ಅವರು, ʼಅನಾರೋಗ್ಯದ ಹೆಸರಿನಲ್ಲಿ ಸತ್ಯೇಂದ್ರ ಜೈನ್ ಅವರು ಅತ್ಯಾಚಾರಿಯಿಂದ ಮಸಾಜ್ ಪಡೆಯುತ್ತಿದ್ದಾರೆ. ಇದರ ಬಗ್ಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ನಾಚಿಕೆಯಾಗಬೇಕು. ಇಲ್ಲಿಯವರೆಗೆ ಅವರಿಗೆ ಏಕೆ ಜಾಮೀನು ಸಿಗಲಿಲ್ಲ? ಸಾಕಷ್ಟು ವಕೀಲರು ಇಲ್ಲವೇ? ಗಂಭೀರ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದಾರೆ, ಅದಕ್ಕಾಗಿಯೇ ಅವರಿಗೆ ಜಾಮೀನು ಪಡೆಯುವುದು ಕಷ್ಟವಾಗುತ್ತಿದೆʼ ಎಂದು  ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು