Saturday, July 5, 2025

ಸತ್ಯ | ನ್ಯಾಯ |ಧರ್ಮ

ಲಡಾಖ್ : ಜಾಲಿರೈಡ್ ನಲ್ಲಿ ರಾಹುಲ್ ಗಾಂಧಿ

ಲಡಾಖ್: ಸೆಪ್ಟೆಂಬರ್ 10 ರಂದು ನಡೆಯಲಿರುವ ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ-ಕಾರ್ಗಿಲ್ (Ladakh Autonomous Hill Development Council-Kargil – LAHDC-Kargil)) ಚುನಾವಣೆಗೆ ಕೆಲವೇ ವಾರಗಳು ಇದ್ದು, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಲಡಾಖ್ ಗೆ ಬೇಟಿ ನೀಡಿ ಜಾಲಿ ರೈಡ್‌ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ತಮ್ಮ ಇನಿಸ್ಟಾಗ್ರಾಂ ಪೇಜ್ ಗಳಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಸುಪ್ರಸಿದ್ಧ ಪಾಂಗೊಂಗ್ ಸರೋವರಕ್ಕೆ ತೆರಳಿದ್ದಾರೆ. ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಲಡಾಖ್ ಬೈಕ್ ಸವಾರಿಯ ಫೋಟೋಗಳನ್ನು ಅವರ ಇನ್ಸ್ಟಾಗ್ರಾಮ್ ನಲ್ಲಿ ನೋಡಬಹುದು.

https://www.instagram.com/p/CwHeZIGS-UA/?utm_source=ig_web_copy_link&igshid=MzRlODBiNWFlZA==

ಈ ಸಂದರ್ಭದಲ್ಲಿ ಫೋಟೋಗಳನ್ನು ಹಂಚಿಕೊಂಡರುವ ರಾಹುಲ್ ಗಾಂಧಿ, “ಪಾಂಗೊಂಗ್ ಸರೋವರಕ್ಕೆ ಹೋಗುವ ದಾರಿಯಲ್ಲಿ ಹಿಂದೆ ನನ್ನ ತಂದೆ ಇದು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು ಎಂದು ಹೇಳುತ್ತಿದ್ದರು,” ಎಂದು ಬರೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page