Home ದೇಶ ಮುಂದಿನ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ: ಬಿಹಾರ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಭವಿಷ್ಯ

ಮುಂದಿನ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ: ಬಿಹಾರ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಭವಿಷ್ಯ

0

ಪಟನಾ: ರಾಜ್ಯದಲ್ಲಿ “ಹಳೆಯ ಮತ್ತು ದುರ್ಬಲ” ಎನ್‌ಡಿಎ ಸರ್ಕಾರವನ್ನು ತೆಗೆದುಹಾಕಲು ಯುವಕರು ಸಂಕಲ್ಪ ಮಾಡಿದ್ದಾರೆ, ಮತ್ತು ಮುಂದಿನ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಂಗಳವಾರ ಪ್ರತಿಪಾದಿಸಿದ್ದಾರೆ.

ನಾವಾದಾದಲ್ಲಿ ಕಾಂಗ್ರೆಸ್‌ನ ‘ಮತದಾರರ ಅಧಿಕಾರ ಯಾತ್ರೆ’ಯ ಮೂರನೇ ದಿನದಂದು ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಾದವ್, ಈಗ ಯುವ ಪೀಳಿಗೆಗೆ ರಾಜ್ಯವನ್ನು ನಡೆಸುವ ಅವಕಾಶ ನೀಡುವ ಸಮಯ ಬಂದಿದೆ ಎಂದು ಹೇಳಿದರು.

“ನಿಮಗೆಲ್ಲಾ ಗೊತ್ತಿರುವಂತೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ‘ಖಟಾರಾ’ (ದುರ್ಬಲ) ಆಗಿದ್ದು, ಅದನ್ನು ತುರ್ತಾಗಿ ಬದಲಿಸಬೇಕು. ಈಗ ಯುವಕರಿಗೆ ಅವಕಾಶ ಸಿಗಬೇಕು… ಬಿಹಾರಕ್ಕಾಗಿ ನಮ್ಮ ಬಳಿ ಒಂದು ಸ್ಪಷ್ಟ ದೃಷ್ಟಿಕೋನವಿದೆ. ಈ ಹಳೆಯ ಮತ್ತು ದುರ್ಬಲ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಮುಂದಿನ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿಯವರು ಪ್ರಧಾನಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಯುವಕರು ಸಂಕಲ್ಪ ಮಾಡಿದ್ದಾರೆ,” ಎಂದು ಅವರು ತಿಳಿಸಿದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಒಂದು ಹುನ್ನಾರವಾಗಿದೆ ಎಂದು ಯಾದವ್ ಪುನರುಚ್ಚರಿಸಿದರು.

“ಎಸ್‌ಐಆರ್ ಮತಗಳ ಸುಲಿಗೆಯಾಗಿದ್ದು, ಅದನ್ನು ನಾವು ಆಗಲು ಬಿಡುವುದಿಲ್ಲ. ಬಿಹಾರದಲ್ಲಿ ಮತದಾರರ ಹಕ್ಕನ್ನು ಕಸಿದುಕೊಳ್ಳಲು ಆಡಳಿತ ಪಕ್ಷವು ನಡೆಸಿದ ಸಂಚು ಇದು” ಎಂದು ಅವರು ಆರೋಪಿಸಿದರು.

You cannot copy content of this page

Exit mobile version