Tuesday, August 19, 2025

ಸತ್ಯ | ನ್ಯಾಯ |ಧರ್ಮ

ಬಿಹಾರದಲ್ಲಿ ಮತ ಪಟ್ಟಿ ತೀವ್ರ ಪರಿಷ್ಕರಣೆ (SIR) ವಿರುದ್ಧ ರಾಹುಲ್ ಗಾಂಧಿ “ಮತ ಅಧಿಕಾರ ಯಾತ್ರೆ”

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಜನರ ಮತದಾನದ ಹಕ್ಕಿನ ಮೇಲೆ ನಡೆದ ದಾಳಿಯನ್ನು ಎತ್ತಿ ತೋರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಶನಿವಾರ ತಿಳಿಸಿದ್ದಾರೆ. ‘ಮತ ಅಧಿಕಾರ ಯಾತ್ರೆ’ ಎಂಬ ಹೆಸರಿನಿಂದ ಶುರುವಾಗುವ ಈ ಯಾತ್ರೆಗೆ ಬಹುತೇಕ INDIA ಮೈತ್ರಿಕೂಟ ಬೆಂಬಲಕ್ಕೆ ನಿಲ್ಲಲಿದೆ.

ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆಯುವ ರ್ಯಾಲಿಯೊಂದಿಗೆ ‘ಮತ ಅಧಿಕಾರ ಯಾತ್ರೆ’ ಮುಕ್ತಾಯಗೊಳ್ಳುವವರೆಗೆ ಹದಿನೈದು ದಿನಗಳ ಕಾಲ ರಾಜ್ಯದಲ್ಲಿ ಇರಲಿದ್ದಾರೆ ಎಂದು ಹೇಳಿದರು.

ರಾಹುಲ್ ಗಾಂಧಿಯವರು ಸಸಾರಂನಿಂದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯವಿರುವ ಎಲ್ಲಾ ಅನುಮತಿಯನ್ನು ಪಡೆಯಲಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಯಾತ್ರೆಯು INDIA ಬಣದ ಪರವಾಗಿ ತನ್ನ ಪ್ರಭಾವವನ್ನು ಇನ್ನಷ್ಟು ಬೀರಲಿದೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಆಗಸ್ಟ್ 20, 25 ಮತ್ತು 31 ರ ಮೂರು ದಿನಗಳ ಹೊರತುಪಡಿಸಿ ಈ ಯಾತ್ರೆ ನಡೆಯಲಿದೆ. “ರಾಜ್ಯದ 25 ಜಿಲ್ಲೆಗಳನ್ನು” ಒಳಗೊಳ್ಳುವ ಯಾತ್ರೆಯ ನೇತೃತ್ವ ವಹಿಸಲು ರಾಹುಲ್ ಗಾಂಧಿ “ಸುಮಾರು 15 ದಿನಗಳ ಕಾಲ ಬಿಹಾರದಲ್ಲಿ ಉಳಿಯುವ” ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.

“ಸಸಾರಾಮ್‌ನಲ್ಲಿ, ರಾಹುಲ್ ಗಾಂಧಿ ಅವರೊಂದಿಗೆ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಮೂರು ಎಡ ಪಕ್ಷಗಳು ಸೇರಿದಂತೆ ನಮ್ಮ ಇತರ ಮೈತ್ರಿ ಪಾಲುದಾರರು ಸೇರುವ ಸಾಧ್ಯತೆಯಿದೆ. ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆಯುವ ಅಂತಿಮ ರ್ಯಾಲಿಗೆ, ಸಾಧ್ಯವಾದಷ್ಟು ಸಮಾನ ಮನಸ್ಕ ಪಕ್ಷಗಳ ನಾಯಕರನ್ನು ಕರೆತರಲು ನಾವು ಪ್ರಯತ್ನಿಸುತ್ತೇವೆ,” ಎಂದು ಅಖಿಲೇಶ್ ಪ್ರಸಾದ್ ಸಿಂಗ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page