ಕಲಬುರಗಿ : ಕುರಿಗಳ ಮೇಲೆ ರೈಲು ಹರಿದು ಸುಮಾರು 70 ಕುರಿಗಳು ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಮೊಗಲಾ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ.
ರೈಲ್ವೇ ಹಳಿಗಳ ಮೇಲೆ ಇದ್ದ ಕುರಿಗಳ ಮೇಲೆ ಬೆಂಗಳೂರಿನ ನಾಂದೇಡ್ ಲಿಂಕ್ ಎಕ್ಸ್‌ಪ್ರೆಸ್ ರೈಲು ಮದ್ಯಾಹ್ನ 12ರ ಹೊತ್ತಿಗೆ ಕುರಿಗಳ ಮೇಲೆ ಹರಿದು ಹೋಗಿದ್ದು ಸುಮಾರು 70 ಕುರಿಗಳು ಸ್ಥಳದಲ್ಲೇ ಮೃತ ಪಟ್ಟಿದ್ದಾವೆ. ರೈಲು ಬೆಂಗಳೂರಿನಿಂದ ತೆರಳುತ್ತಿದ್ದಾಗ ಕಲಬುರಗಿ ಜಿಲ್ಲೆಯ ಮೊಗಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ವಿಷಯ ತಿಳಿದ ರೈಲ್ವೇ ಪೋಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಮೃತ ಪಟ್ಟ ಕುರಿಗಳು ಮಲ್ಲಪ್ಪ, ರಾಘವೇಂದ್ರ ಉಮೇಶ ಬಡಿಗೇರ, ಶ್ರೀದೇವಿ ರಾಜು, ಗೌಸ್ಮಿಯ್ಯಾ ಇಮಾಮ್‌ಸಾಬ್, ಅಶೋಕ ಮೊಗಲಯ್ಯಾ, ಶಿವಕಾಂತಮ್ಮ ಅರ್ಜುನ ಮತ್ತು ಶ್ರೀದೇವಿ ರಾಜು ಅವರಿಗೆ ಸೇರಿದ್ದಾಗಿವೆ ಎಂದು ತಿಳಿದು ಬಂದಿವೆ.
ಇದನ್ನೂ ನೋಡಿ : ದಿಲ್ ಪಸಂದ್ ಟೀಸರ್ ಬಿಡುಗಡೆ, ನವೆಂಬರ್ 11ಕ್ಕೆ ತೆರೆಗೆ