Thursday, June 20, 2024

ಸತ್ಯ | ನ್ಯಾಯ |ಧರ್ಮ

ಸರಣಿ ಅಪಘಾತ ಮತ್ತು ಸಾವಿನ ನಂತರ ಎಚ್ಚೆತ್ತ ರೈಲ್ವೇ: 18,000 ಸಹಾಯಕ ಲೋಕೊ ಪೈಲಟ್‌ ನೇಮಕಾತಿಗೆ ನಿರ್ಧಾರ

ಹೊಸದೆಹಲಿ: ಕಳೆದ ಕೆಲವು ವರ್ಷಗಳಿಂದ ಒಂದರ ಹಿಂದೆ ಒಂದರಂತೆ ನಡೆದ ಅಪಘಾತ ಸರಣಿಯ ನಂತರ ಕಡೆಗೂ ಕೇಂದ್ರ ತನ್ನ ನಿರ್ಲಕ್ಷ್ಯದಿಂದ ಎಚ್ಚೆತ್ತುಕೊಂಡಿದೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಏನು ಮಾಡಬೇಕು ಎನ್ನುವುದರ ಕುರಿತು ಅದು ಯೋಚಿಸಿದಂತಿದೆ.

ಅಪಘಾತ ಸ್ಥಳಕ್ಕೆ ಬಂದು ಕೇವಲ ಪಿಆರ್‌ ಸ್ಟಂಟುಗಳಲ್ಲೇ ತೊಡಗಿಸಿಕೊಂಡಿರುತ್ತಿದ್ದ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಈಗ ಸಿಬ್ಬಂದಿ ಕೊರತೆಯಿಂದ ಸೊರಗಿರುವ ಇಲಾಖೆಗೆ 18,000 ಸಹಾಯಕ ಲೋಕೊ ಪೈಲಟ್‌ಗಳ ನೇಮಕಾತಿಗೆ ಮುಂದಾಗಿದ್ದಾರೆ.‌

ಸುರಕ್ಷತೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಭಾರತೀಯ ರೈಲ್ವೇ ಮುಂದಿನ ಆರರಿಂದ ಎಂಟು ತಿಂಗಳಲ್ಲಿ 18,799 ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿದೆ.

ಜೂನ್ 18ರಂದು, ಇಲಾಖೆಯು 5,696 ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ; ಮುಂದೆ ಹಂತ ಹಂತವಾಗಿ 18,799 ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.

ರೈಲ್ವೇ ಮಂಡಳಿ ಹೊರಡಿಸಿರುವ ಈ ಸುತ್ತೋಲೆಯಲ್ಲಿ ಈ ನಿರ್ಧಾರವನ್ನು ತಕ್ಷಣವೇ ಪ್ರಕ್ರಿಯೆಗೊಳಿಸುವಂತೆ ವಲಯ ರೈಲ್ವೆಗಳಿಗೆ ಸೂಚಿಸಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕನಿಷ್ಠ ಆರು ತಿಂಗಳು ತೆಗೆದುಕೊಳ್ಳುತ್ತದೆ. ಏಕೆಂದರೆ ಪೋಸ್ಟ್‌ಗಳನ್ನು ನೋಟಿಫಿಕೇಷನ್ ಮಾಡಬೇಕಾಗಿದೆ ಮತ್ತು ಅಭ್ಯರ್ಥಿಗಳು ಲಿಖಿತ, ಯೋಗ್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ತಾನು ರೈಲ್ವೇ ಸುರಕ್ಷತೆಗೆ ಒತ್ತು ನೀಡುತ್ತಿರುವುದಾಗಿ ಹೇಳಿಕೊಂಡರೂ, ರೈಲ್ವೇ ಸುರಕ್ಷತೆಗಾಗಿ ಮೀಸಲಿಟ್ಟಿರುವ 10 ಲಕ್ಷ ಹುದ್ದೆಗಳಲ್ಲಿ ಈ ವರ್ಷದ ಮಾರ್ಚ್‌ ಅಂತ್ಯಕ್ಕೆ 1.5 ಹುದ್ದೆಗಳು ಖಾಲಿ ಉಳಿದಿವೆ.

ಸುರಕ್ಷತಾ ವರ್ಗದ ಹುದ್ದೆಗಳಲ್ಲಿ ರೈಲು ಚಾಲಕರು, ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ನಿಯಂತ್ರಕರು, ಲೊಕೊ ಬೋಧಕರು, ರೈಲು ನಿಯಂತ್ರಕರು, ಟ್ರ್ಯಾಕ್ ನಿರ್ವಾಹಕರು, ಸ್ಟೇಷನ್ ಮಾಸ್ಟರ್‌ಗಳು, ಪಾಯಿಂಟ್‌ಮೆನ್, ಎಲೆಕ್ಟ್ರಿಕ್ ಸಿಗ್ನಲ್ ನಿರ್ವಾಹಕರು ಮತ್ತು ಸಿಗ್ನಲಿಂಗ್ ಮೇಲ್ವಿಚಾರಕರು, ಇತ್ಯಾದಿ ಸೇರಿವೆ.

Related Articles

ಇತ್ತೀಚಿನ ಸುದ್ದಿಗಳು