Monday, June 17, 2024

ಸತ್ಯ | ನ್ಯಾಯ |ಧರ್ಮ

ಹಾಲಿನ ದರ ಪರಿಷ್ಕರಣೆ ; ಏರಿಕೆಯ ಸಂಪೂರ್ಣ ಲಾಭ ರೈತರಿಗೆ : ಮುಖ್ಯಮಂತ್ರಿ ಸ್ಪಷ್ಟನೆ

ರಾಜ್ಯದಲ್ಲಿ ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಾಗಲಿದೆ. ಹಾಲಿನಲ್ಲಿ ಪ್ರತೀ ಲೀಟರ್ ಗೆ 3 ರೂ ಮತ್ತು ಮೊಸರಿನಲ್ಲಿ ಪ್ರತೀ ಕೆಜಿಗೆ 3 ರೂಪಾಯಿ ಏರಿಕೆ ಕಾಣಲಿದೆ.

ಹಾಲಿನ ದರ ಏರಿಕೆಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿತ್ತು. ಆ ಕಾರಣ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರು 3 ರೂಪಾಯಿ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಿದ್ದರು.

ಹೆಚ್ಚಳವಾದ 3 ರೂಪಾಯಿ ಹಾಲು ರೈತರಿಗೇ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಆದ್ದರಿಂದ ಹೊಸ ದರ ಪರಿಷ್ಕರಣೆ ನಂತರ ಆಗಸ್ಟ್ ಒಂದರಿಂದಲೇ ಜಾರಿ ಎಂದು ಸರ್ಕಾರ ಘೋಷಿಸಿದೆ‌‌.

ಇನ್ನು ಯಾವ ಯಾವ ಹಾಲಿನ ಬೆಲೆ ಎಷ್ಟು ಎಂದು ನೋಡುವುದಾದರೆ
ಟೋನ್ಡ್ ಹಾಲು (ನೀಲಿ ಪೊಟ್ಟಣ) – ಹಳೆಯ ದರ 39, ಹೊಸ ದರ 42
ಹೋಮೋಜಿನೈಸ್ಡ್ ಹಾಲು – ಹಳೆಯ ದರ 40, ಹೊಸ ದರ 43
ಹಸಿರು ಪೊಟ್ಟಣದ ಹಾಲು – ಹಳೆಯ ದರ 43, ಹೊಸ ದರ 46
ಸ್ಪೆಷಲ್ ಹಾಲು (ಕೇಸರಿ ಪೊಟ್ಟಣ) – ಹಳೆಯ ದರ 45, ಹೊಸ ದರ 48
ಮೊಸರು ಪ್ರತಿ ಕೆಜಿಗೆ – ಹಳೆಯ ದರ 47, ಹೊಸ ದರ 50
ಮಜ್ಜಿಗೆ 200 ಮಿಲಿ ಪೊಟ್ಟಣ – ‌ಹಳೆಯ ದರ 8, ಹೊಸ ದರ 9

ಇನ್ನು ನಂದಿನಿ ಹಾಲು, ಮೊಸರಿನ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ “ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದ್ದು, ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬೆಲೆ ಏರಿಕೆ ಅನಿವಾರ್ಯ” ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಬೆಲೆ ಏರಿಕೆಯ ಸಂಪೂರ್ಣ ಲಾಭ ರೈತರಿಗೆ ಸಿಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು