Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಜ್ಯದಾದ್ಯಂತ ʼಕೋಟಿಕಂಠ ಗಾಯನʼ ಕಾರ್ಯಕ್ರಮ : 1.15 ಕೋಟಿಗಿಂತಲೂ ಹೆಚ್ಚು ಜನ ನೋಂದಣಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ರಾಜ್ಯಾದ್ಯಂತ ಕೋಟಿ ಕಂಠ ಗಾಯನ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ರಾಜ್ಯಾದ್ಯಂತ ಕಾರ್ಯಕ್ರಮಗಳು ಜರುಗುತ್ತಿವೆ.

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ರಾಜ್ಯಾದ್ಯಂತ ಕೋಟಿ ಕಂಠ ಗಾಯನ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ರಾಜ್ಯಾದ್ಯಂತ ಕಾರ್ಯಕ್ರಮಗಳು ಜರುಗುತ್ತಿವೆ

ಕರ್ನಾಟಕ ಸರ್ಕಾರ 67ನೇ  ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ರಾಜ್ಯಾದ್ಯಂತ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ. ಈಗಾಗಲೇ 1.15 ಕೋಟಿಗಿಂತಲೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿದ್ದು, ಸಾವಿರಾರು ಮಂದಿ ಕಾರ್ಯಕ್ರದದಲ್ಲಿ ಗೀತಗಾಯನಕ್ಕೆ ಸಿದ್ಧರಾಗಿದ್ದಾರೆ.

ಬೆಂಗಳೂರಿನಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ 50ಸಾವಿರ ಮಂದಿ ʼಜಯ  ಭಾರತ ಜನನಿಯ ತನುಜಾತೆʼ, ಹುಯಿಲಗೋಳ ನಾರಾಯಣರಾಯರ ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ, ನಾಡೋಜ ಡಾ.ಚೆನ್ನವೀರ ಕಣವಿಯವರ ʼವಿಶ್ವ ವಿನೂತನ ವಿದ್ಯಾ ಚೇತನʼ, ಡಾ.ಡಿ.ಎಸ್‌ ಕರ್ಕಿರವರ ʼಹಚ್ಚೇವು ಕನ್ನಡದ ದೀಪʼ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮತ್ತು ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವʼ ಈ ಆರು ಹಾಡುಗಳನ್ನು ಏಕಕಾಲಕ್ಕೆ ಸಿದ್ದತೆ ನಡೆಸಲಾಗುತ್ತಿದೆ.

ನಗರದ ಮೆಟ್ರೋ ನಿಲ್ಧಾಣಗಳು, ವಿಮಾನ ನಿಲ್ದಾಣ, ಆಟೋ ನಿಲ್ದಾಣ, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಲಾಲ್ ಬಾಗ್‌ ಸೇರಿದಂತೆ ಬೆಂಗಳೂರಿನ ಹಲವೆಡೆ ಮೈಸೂರು ಅರಮನೆ ,ಚಿತ್ರದುರ್ಗ ಕೋಟೆ, ಮಂಗಳೂರು, ಕೊಪ್ಪಳ ಇನ್ನೂ ರಾಜ್ಯದ ನಾನಾ ಭಾಗಗಳಲ್ಲಿ ಸರ್ಕಾರ ಆಯೋಜಿಸಿರುವ ಕೋಟಿಕಂಠ ಗಾಯನದ ಸಂಭ್ರಮ ನಡೆಸಲಾಗುತ್ತಿದೆ.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ʼಕೋಟಿಕಂಠ ಗಾಯನʼ ಕಾರ್ಯಕ್ರಮ ಜರುಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲಹೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು