Tuesday, December 31, 2024

ಸತ್ಯ | ನ್ಯಾಯ |ಧರ್ಮ

ರಂಗಸಿರಿ ಸಹಯೋಗದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ

ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧೀ ಭವನದಲ್ಲಿ ರಂಗಸಿರಿ ಹಾಸನ ಸಹಯೋಗದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಹೆಚ್.ಆರ್. ಸ್ವಾಮಿ, ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಬಿ. ಮದನ್‌ಗೌಡ ಹಾಗೂ ಭಾನು ಮುಸ್ತಾಕ್‌ ಇವರನ್ನು ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಇತರರು ಸನ್ಮಾನಿಸಿ ಗೌರವಿಸಿದರು.


ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮೂವರು ಮುತ್ತುಗಳಿಗೆ ಸನ್ಮಾನಿಸಿರುವುದು ನನಗೆ ಸಂತೋಷತಂದಿದೆ. ಸಮಾಜದ ಏಳುಬೀಳುಗಳನ್ನು ನೈಜವಾಗಿ ತೋರಿಸುವವರು ಎಂದರೇ ಪತ್ರಕರ್ತರು. ಅವರ ಕ್ಷೇಮಾಭಿವೃದ್ಧಿಗಾಗಿ ಸರಕಾರದ ಜೊತೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಪತ್ರಕರ್ತರ ಜೊಗೆ ಕಂಡಿತವಾಗಿಯೂ ಬೆನ್ನೆಲುಬಾಗಿ ನಾವು ಇರುತ್ತೇವೆ. ನಿಮ್ಮ ಸಲಹೆ ಸಹಕಾರ ನಮಗೆ ಇರಬೇಕು. ನಾವು ತಪ್ಪುದಾರಿಗೆ ಹೋದರೇತಿದ್ದುವ ಕೆಲಸ ತಂದೆತಾಯಿ ಬಿಟ್ಟರೇ ಪತ್ರಕರ್ತರು ಮಾತ್ರಎಂದು ಹೇಳುವುದಕ್ಕೆ ನನಗೆ ಹೆಮ್ಮೆಆಗುತ್ತದೆ ಎಂದರು.
ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ. ಶಿವಾನಂದ್ ತಗಡೂರು ಮಾತನಾಡಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಹೆಚ್.ಬಿ. ಮದನ್‌ಗೌಡರು ಇದುವರೆಗೂ ಒಳಿತಾಗುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ಪಾತ್ರ ಮಹತ್ವವಾಗಿದೆ. ಸಾಂಸ್ಕೃತಿಕ ವಲಯಕ್ಕೆ ಹೋದರೇ ಅಲ್ಲೂ ಕೂಡ ತಮ್ಮ ಸಂಘಟನೆ ಇರುತ್ತದೆ. ಹಲ್ಮಿಡಿ ಶಾಸನ ಎಂದರೇ ಅನೇಕರಿಗೆ ಗೊತ್ತಿರಲಿಲ್ಲ. ಅದಕ್ಕೊಂದು ಮಹತ್ವ ಕೊಟ್ಟವರು ಮದನ್‌ಗೌಡರು. ಅವರು ಕಸಾಪ ಅಧ್ಯಕ್ಷರಾದ ವೇಳೆ ಹಲ್ಮಿಡಿಗೆ ನಿರಂತರವಾಗಿ ಹೋಗಿ ಬಂದು ಈಗ ಗಮನಸೆಳೆದಿದ್ದಾರೆ ಎಂದರು. ಹೆಚ್.ಬಿ. ಮದನ್‌ಗೌಡರಿಗೆ ಇ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಉತ್ತಮವಾಗಿದೆಎಂದು ಬಣ್ಣಿಸಿದರು. ಪತ್ರಕರ್ತರ ಗ್ರಾಮಿಣ ಬಸ್ ಪಾಸ್‌ ಇನ್ನೊಂದು ವಾರದಲ್ಲಿ ಸಿಗಲಿದೆ. ಇದು ಮೂರು ದಶಕಗಳ ಹೋರಟಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಹನುಮಂತಯ್ಯ ಮಾತನಾಡಿ, ಕೆಲ ಕೆಲವೇ ಜನರಲ್ಲಿ ಸಾಹಿತ್ಯ ಎಂದರೇ ಕೆಲ ಸಮುದಾಯದವರ ಸ್ವತ್ತು ಆಗಿತ್ತು. ಉಳಿದವರು ಓದುವುದಕ್ಕೆ ಮಾತ್ರ ಬರೆಯುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾಲ ಹಿಂದೆ ಇತ್ತು. ಆ ನಂತರದಲ್ಲಿ 70ರ ದಶಕದಲ್ಲಿ ಕರ್ನಾಟಕದಲ್ಲಿಒಂದು ಹೊಸ ರೀತಿಯ ಚಿಂತನೆ ಆರಂಭವಾಯಿತು. ಮೊದಲ ಬಾರಿಗೆ ಯಾರ ಧ್ವನಿಯನ್ನು ಹತ್ತಿಕ್ಕಲಾಗಿತ್ತೊ ಈ ಸಮಾಜ ಅಸ್ಪುರ್ಶ್ಯ ಸಮಾಜವನ್ನು ಮೊದಲ ಬಾರಿಗೆ ಮಾತನಾಡಲುಆರಂಭ ಮಾಡಲಾಯಿತು. ರಾಜ್ಯ ಪ್ರಶಸ್ತಿ ಪಡೆದಿರುವ ಹೆಚ್.ಬಿ. ಮದನ್‌ಗೌಡಅವರು ಪತ್ರಕರ್ತರಾಗಿ ಸಹಕಾರ ಚಳುವಳಿಗಳಲ್ಲಿ ತೊಡಗಿಸಿಕೊಂಡವರು, ಸಾಹಿತ್ಯದ ಸೇವೆಯನ್ನು ಮಾಡುವ ಈ ಔದಾರ್ಯ ಎಲ್ಲಾರಿಗೂ ಇರುವುದಿಲ್ಲ. ಮದನ್‌ಗೌಡ ಅವರು ಅಪುರೂಪದ ಔದಾರ್ಯವನ್ನಿಟ್ಟುಕೊಂಡಿರುವಂತಹ ಬಹಳ ದೊಡ್ಡ ವ್ಯಕ್ತಿತ್ವ. ಅವರಿಗೆ ಚಿಕ್ಕವಯಸಿನಲ್ಲಿಯೇ ಈ ಪ್ರಶಸ್ತಿ ಬಂದಿರುವುದು ಸಂತೋಷ. ಈ ವಯಸ್ಸಿನಲ್ಲಿ ಪ್ರಶಸ್ತಿ ಕೊಡುವುದರಿಂದ ಇನ್ನು ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆ ಮೂಲಕ ಅವರಿಂದ ಹೆಚ್ಚು ಕೆಲಸ ಮಾಡಿಸಲು ಸಾಧ್ಯವಾಗುತ್ತದೆ. ಅಂತಹ ಅವಕಾಶ ಮದನ್‌ಗೌಡರಿಗೆ ಬಂದಿರುವುದು ಹಾಸನ ಜಿಲ್ಲೆ ಹೆಮ್ಮೆಪಡುವಂತದಾಗಿದೆ ಎಂದು ಶ್ಲಾಘಿಸಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹೆಚ್.ಆರ್. ಸ್ವಾಮಿ ಮಾತನಾಡಿ, ಕನ್ನಡ ಎಂದರೇ ಕೇವಲ ಬಾಷೆಯಲ್ಲ. ಅದರಲ್ಲಿ ನೆಲ, ಜಲ ಇವೆಲ್ಲವೂ ಕೂಡಕನ್ನಡ. ಯಾರೆರೂ ಭಾಷೆ ಉಳಿವಿಗಾಗಿ ದುಡಿದಿದ್ದಾರೆ ಅವರನ್ನೆಲ್ಲಾ ಗೌರವಿಸಬೇಕು ಸನ್ಮಾನಿಸಬೇಕು. ಕೊರಚ ಸಮುದಾಯದವರಲ್ಲಿ ಊಟ, ದೇವರುಎನ್ನುವುದಕ್ಕೆ ಆ ಭಾಷೆಗಳಲ್ಲಿ ಪದಗಳೆ ಇಲ್ಲ. ಕನ್ನಡದಲ್ಲೆ ಹೇಳಬೇಕು. ಯಾವುದೇ ಬುಡಕಟ್ಟುಗಳಿಗೆ ದೇವರುಗಳ ಅಸ್ಥಿತ್ವ ಇಲ್ಲ. ಅವರೆಲ್ಲಾ ಪ್ರಕೃತಿಯ ಆರಾದಕರು. ಅವರುಗಳೆಲ್ಲಾ ಗಿಡಕ್ಕೆ ಪೂಜೆ ಮಾಡಿಗಿಡಕ್ಕೆ, ಉತ್ತಕ್ಕೆ ಪಜೆ ಮಾಡಿ ಮರಿಒಡೆಯುವವರು. ಇವರಿಗೆ ದೇವರುಗಳ ಕಲ್ಪನೆಯೇಇಲ್ಲ. ಇವತ್ತುಎಲ್ಲಾದಲಿತರ ಮನೆಯಲ್ಲಿ ಸತ್ಯನಾರಾಯಣ ಬಂದಿದ್ದಾನೆ. ಜೊತೆಗೆ ಅಂಬೇಡ್ಕರ್‌ ಕೂಡ ಇರುವುದು ಬಹಳ ಆಶ್ಚರ್ಯ. ಹಳೆ ಸಂಸ್ಕೃತಿ ಮರೆತು ಈಗಿನ ಸಂಸ್ಕೃತಿಗೆ ಬಂದಿದ್ದಾರೆ. ಈ ರೀತಿ ಅನೇಕ ಬುಡಕಟ್ಟುಗಳೂ ನಮ್ಮಲ್ಲಿಇದೆ. ಅಧ್ಯಾಯನ ಮಾಡುವವರುಅದೆ ಸಮುದಾಯದವರುಆದರೂಕೂಡ ಸಮಸ್ಯೆಗಳಿವೆ. ನಮ್ಮ ಸಮುದಾಯವನ್ನು ವೈಭವಿಕರಿಸುವುದೇ ಹೆಚ್ಚು. ಪಿ.ಹೆಚ್.ಡಿ. ನಾನು ಮಾಡಿದ್ದೇನೆ ಆದರೇ ಅದರಿಂದ ಯಾವ ಉಪಯೋಗವಿಲ್ಲ. ನಾನು ಇಡಿ ಕರ್ನಾಟಕ ಸುತ್ತಲಾಗಿದ್ದು, ಈ ಸಮುದಾಯಗಳು ನಿಮಗೆ ಎಲ್ಲೂ ಸಿಗುವುದಿಲ್ಲ. ಕೊರಚ ಬುಡಕಟ್ಟು ವರ್ಗಾದವರ ಹುಡುಕಿಕೊಂಡು ಹೋದರೇ ಈತನು ಪೊಲೀಸನೆಂದು ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ನನಗೆ ಬುಡಕಟ್ಟು ಭಾಷೆ ಬಂದಿದ್ದರಿಂದ ನಾನು ಬಚಾವ್‌ ಆಗಿರುವುದಾಗಿ ನಡೆದ ಘಟನೆ ಬಗ್ಗೆ ಇದೆ ವೇಳೆ ತೋಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಕೆ.ಹೆಚ್. ವೇಣುಕುಮಾರ್, ಪತ್ರಕರ್ತರಿಗೆ ವಿಮಾ ಬಾಂಡ್ ಸೌಲಭ್ಯಕಲ್ಪಿಸಲು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿ ಯಶಸ್ವಿಗೊಳಿಸಲಾಗಿದೆ. ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮುಖ್ಯ ಉದ್ದೇಶ ವಿಮಾ ಬಾಂಡ್ ವಿತರಣೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಕೆ.ಹೆಚ್. ವೇಣುಕುಮಾರ್ ವಹಿಸಿದ್ದರು. ಇದೆ ವೇಳೆ ಪತ್ರಕರ್ತರ ವಿಮಾ ಬಾಂಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಂಗಸಿರಿ ಕಾರ್ಯದರ್ಶಿ ಪಿ. ಶಾಡ್ರಾಕ್, ಕೇಶವರೆಡ್ಡಿ ಹಂದ್ರಾಳ್, ರಾಜ್ಯಕರ‍್ಯಕಾರಿ ವಿಶೇಷ ಆಹ್ವಾನಿತರಾದರ ವಿನಾಕಲಗೂಡು, ಜಿಲ್ಲಾಕರ‍್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಡಿ. ಮೋಹನ್, ಕೆ.ಎಂ. ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page