Friday, June 14, 2024

ಸತ್ಯ | ನ್ಯಾಯ |ಧರ್ಮ

ʼರಾಮ ಮಂದಿರ ಏಕೆ ಬೇಡ? ಕೃತಿ ವಿವಾದ : ಪ್ರೊಫೆಸರ್‌ ಕೆ.ಎಸ್ ಭಗವಾನ್‌ ಬಂಧನಕ್ಕೆ ವಾರೆಂಟ್‌ ಜಾರಿ

ಸಾಗರ: ʼರಾಮ ಮಂದಿರ ಏಕೆ ಬೇಡ?ʼ ಕೃತಿ ರಚಿಸಿದ ಸಾಹಿತಿ ಭಗವಾನ್‌ ಕೋರ್ಟ್‌ಗೆ ಹಾಜರಾಗದ ಕಾರಣ ಅವರ ಬಂಧನಕ್ಕೆ ಸಾಗರ JMFC ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ.

ಪ್ರೊಫೆಸರ್‌ ಕೆ.ಎಸ್ ಭಗವಾನ್‌ ರಚಿಸಿದ ʼರಾಮ ಮಂದಿರ ಏಕೆ ಬೇಡ?ʼ ಕೃತಿಯು ವಿವಾದಾತ್ಮಕವಾಗಿದ್ದು, ಇದು ಬಹುಜನರ ಭಾವನೆಗೆ ಧಕ್ಕೆ ತರುತ್ತದೆ ಎಂದು ಸಾಗರ ತಾಲ್ಲೂಕಿನ ಇಕ್ಕೇರಿ ಗ್ರಾಮದ ನಿವಾಸಿ ಮಹಾಬಲೇಶ್ವರ್‌ ಎಂಬುವವರು ತಾಲ್ಲೂಕಿನ JMFC ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ದೂರಿನ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್‌ ವಿರುದ್ದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ IPC ಸೆಕ್ಷನ್‌ 295(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.

ಪ್ರಕರಣದ ವಿಚಾರಣೆಗೆ ನವೆಂಬರ್‌ 3ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಮೈಸೂರು ಎಸ್‌ಪಿ ಅವರ ಮೂಲಕ ಸಮನ್ಸ್‌ ಜಾರಿ ಮಾಡಿತ್ತು. ಆದರೆ ಇಂದು ಅವರು ನ್ಯಾಯಾಲಯಕ್ಕೆ ಹಾಜಾರಾಗದ ಕಾರಣ ಸಾಗರದ JMFC ನ್ಯಾಯಾಧೀಶರಾದ ಶ್ರೀ ಶೈಲ ಭೀಮ್‌ಸೇನ್‌ ಭಗಾಡೆಯವರು ಭಗವಾನ್‌ ಅವರ ಬಂಧನಕ್ಕೆ ಜಾಮೀನು ರಹಿತ ಬಂಧನದ ವಾರೆಂಟ್‌ ಜಾರಿ ಮಾಡಬೇಕೆಂದು ಸಾಗರ ಟೌನ್‌ ಪೊಲೀಸರಿಗೆ ಆದೇಶ ಮಾಡಿದ್ದಾರೆ. ವಕೀಲ ಕೆ.ವಿ ಪ್ರವೀಣ್‌ ದೂರುದಾರ ಮಹಾಬಲೇಶ್ವರ ಅವರ ಪರವಾಗಿ ವಾದವನ್ನು ಮಂಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು