Saturday, June 15, 2024

ಸತ್ಯ | ನ್ಯಾಯ |ಧರ್ಮ

ಈಗಷ್ಟೇ ಜಗ ಕಾಣುತ್ತಿರುವ ಚಿಗುರುಗಳಿಗೆ ರಾಮಯ್ಯನವರು ಬುಡ್ಡೀದೀಪವಿದ್ದಂತೆ -ಆದಿತ್ಯ. ಯುವರಂಗಕರ್ಮಿ,

ನಮ್ಮಜ್ಜ, ಹುಸೇನಜ್ಜ ಹೇಳ್ತಿದ್ರು,ಒಂದೇ ಒಂದು ಹನಿ ಕಲ್ಮಶ ಏಳೇಳು ಕಡಲುಗಳನ್ನ ಕಲುಷಿತ ಮಾಡ್ಬಿಡತ್ತೆ. ಕಲ್ಮಶ ಅಂಟಿಸ್ಕೋಬೇಡಿ.. You are pure. Be like this. I am very happy. ಒಳ್ಳೆ understanding ಇದೆ. ಒಳ್ಳೆ design ಇದೆ. ದೊಡ್‌ಮಾರಿ ಚಿಕ್‌ಮಾರಿ ಒಂದು modern classic ಆಗ್ತದೆ. ಜಗದ ಶ್ರೇಷ್ಠ ನಾಟಕಗಳಿಗೆ ಸೆಡ್ಡು ಹೊಡೆಯುವ ತಾಕತ್ತಿರೋ ರಂಗಪ್ರಯೋಗ ಇದು! ”
ನಿನ್ನೆ ರಾತ್ರಿ ಕರೆ ಮಾಡಿದ ಕೋಟಿಗಾನಹಳ್ಳಿ ರಾಮಯ್ಯ ಸರ್ ಹೇಳಿದ ಮಾತಿದು.ನಮ್ಮ ತಂಡ ನೆಲಸಂಸ್ಕೃತಿ ನಾಟಕೋತ್ಸವದ ಭಾಗವಾಗಿ ಪ್ರಸ್ತುತ ಪಡಿಸಿದ ದೊಡ್‌ಮಾರಿ – ಚಿಕ್‌ಮಾರಿ ರಂಗಪ್ರಯೊಗವನ್ನು ಮೆಚ್ಚಿ, ಅದರ final ರಂಗಪಠ್ಯವನ್ನು ಕಳಿಸಿಕೊಂಡು ಓದಿ, ಇಷ್ಟಪಟ್ಟು ಜೊತೆಗೊಂದಿಷ್ಟು correctionಗಳನ್ನ suggest ಮಾಡೋಕಂತಲೇ ಕರೆ ಮಾಡಿದ್ದರು.


“ನಾನು ನಿಮ್ಮ final version ಓದ್ತಿದ್ದೇನೆ. ಬಹಳ ಇಷ್ಟ ಆಯ್ತು. ನಾಟಕದ Editing ಸರಿಯಾಗಿದೆ, Addition ಕೂಡ..Cultural, Ethical & Political understanding ಕೂಡ perfect ಆಗಿದೆ. ಅದರ ಜೊತೆಗೆ ಒಳ್ಳೆ design ಕೂಡ ಸೇರಿ, ವಾರೆವ್ಹಾ ಅನ್ನೋ ಥರ ಮಾಡಿದ್ದೀರಿ. ನಿರ್ದೇಶನಕ್ಕೆ ಮತ್ತು ಮಕ್ಕಳ energy & performanceಗೆ ಇಲ್ಲಿ ಫುಲ್ ಮಾರ್ಕ್ಸ್.. ಎಲ್ಲರೂ ಮಾತಾಡಲೇಬೇಕಾದ ಪ್ರಯೋಗವಾಗಿ ಸಿದ್ಧವಾಗಿದೆ ಇದು. ನಾಟಕಕಾರನಾಗಿ ನಾನೂ ಯೋಚಿಸದ ರೀತಿ ನಾಟಕ ನನ್ನಿಂದ ಬರೆಸಿಕೊಂಡಿದೆ, ಆದರೆ ಅದೆಲ್ಲ dead words.. ಅದಕ್ಕೆ ಜೀವ ಬಂದಿರೋದು ಆ ಮಕ್ಕಳಿಂದ.. ನಿರ್ದೇಶನದಿಂದ ಬೇರೊಂದು dimension ಸಿಕ್ಕಿರೋದು ಕಾಣಿಸ್ತಿದೆ. ನೀವ್ಯಾರೂ ನನಗೆ ಗೊತ್ತೆಯಿರ್ಲಿಲ್ಲ..


ಯಾವುದೋ 16 ವರ್ಷದ ಹಿಂದೆ ನನ್ನ ನಾಟಕದಲ್ಲಿ ಪಾತ್ರಮಾಡ್ತಿದ್ದ ಹುಡುಗ ಈಗ ಮತ್ತೆ ನಾನೇ ಬರೆದ ನಾಟಕ ನಿರ್ದೇಶಿಸೋದು ಏನು ಸಾಮಾನ್ಯ ಅಲ್ಲರೀ.. ಈ ಕಾಲ ನಮ್ಮನ್ನ ಒಂದು ಮಾಡಿದೆ. ಇದು ಕಾಲದ ತುರ್ತು.. ಜರೂರತ್ತು.
ನಾವೇ ನಾವಾಗುವತ್ತ ಅನ್ನೋದು ನನ್ನ ಮೋಟೋ.. ನಾವು ಮೊದಲು ನಾವಾದರೆ ಬೇರೆಲ್ಲಾ ಆಗ್ಬೋದು. ಅದಕ್ಕೆ ಅದೇ ಕಾರಣಕ್ಕೆ ಇನ್ಮುಂದೆ ನನ್ನ ಎರಡನೆ ಹೆಜ್ಜೆಯಾಗಿ ಮಂಡ್ಯವನ್ನ ನನ್ನ ಕಾರ್ಯಕ್ಷೇತ್ರ ಮಾಡ್ಕೋಳ್ಬೇಕು ಅಂತ ತೀರ್ಮಾನ ಮಾಡಿದೀನಿ. ಇಲ್ಲಿನ ನೆಲನುಡಿಗಳನ್ನ ಕೇಳಿಸ್ಕೊಂಡು ನೂರು ನಾಟಕ ಬರೀತಿನಿ.. ನಾನಲ್ಲ.. ಇಲ್ಲಿನ ಮಕ್ಕಳ ಕೈಯಲ್ಲಿ ಬರೆಸ್ತೀನಿ. ನಾನಿಲ್ಲಿಗೆ ಬಂದಿರೋದೇ ಮಕ್ಕಳಿಗೆ ನಾಟಕ ಬರೆಯೋದನ್ನ ಕಲಿಸೋಕೆ. ನನ್ನದೇನಿದ್ದರೂ ನುಡಿಸಂಗಾತ ಮಾತ್ರ.


ಮಕ್ಕಳ ಪಾದದ ಕೆಳಗಿನಿಂದ ಬರೆಯೋಕೆ, ಬದುಕೋಕೆ ನೆಚ್ಚುವವನು ನಾನು.. ಸರ್ವಾಧಿಕಾರಿಗಳ ತುಳಿತಕ್ಕೆ unimaginable rebel ನಾನು, ಆದರೆ ಮಗುವೊಂದರ ಪಾದದ ಮುಗ್ಧ-ಮುಕ್ತ ಹೆಜ್ಜೆಯಾಟಕ್ಕೆ ತೀರಾ humble ನಾನು.”
ಎಂದಾಗ ಅವರು ಬಿಕ್ಕಿ, ಗದ್ಗದರಾದದ್ದನ್ನು ಅವರ ದನಿ ಸಾಕ್ಷೀಕರಿಸುತ್ತಿತ್ತು.


“ಬುಡ್ಡಿದೀಪ ಲಿವಿಂಗ್ ಸ್ಕೂಲ್‌ ಭಾಗವಾಗಿ BFT ಅಂತ ಮಾಡಬೇಕು ಅಂತಿದ್ದೀನಿ. Buddideepa Futuristic Theatre ಅಂತ. ತುಂಬು ಸಾಧ್ಯತೆಗಳನ್ನು ಒಳಗೊಂಡ project ಅದು. You’ll be a part of it.” ಅಂದಾಗ ನಾನೂ ಬಿಕ್ಕಿದೆ.


“ಈ ನಾಟಕ Publish ಮಾಡಿಸಿದರೆ ನಾಟಕಕಾರನ ಹೆಸರಿನ ಜೊತೆ ಸಹನಾಟಕಕಾರನಾಗಿ ಆದಿತ್ಯ ಅಂತ ಹಾಕಲೇಬೇಕು. I am not joking.. ಈ ನಾಟಕದ construction ಹಾಗೆ ಇದೆ. It deserves.. ಎಲ್ಲಾ ಕಡೆ ಸುತ್ತಬೇಕು ನೀವು ಈ ನಾಟಕ ಇಟ್ಕೊಂಡು. ಜನ ಮಾತಾಡ್ತಾರೆ. ಯಾವ ಅಕಾಡಮಿ, ಪರಿಷತ್ತುಗಳೂ ರಾಮಯ್ಯ ಒಬ್ಬ ನಾಟಕಕಾರ ಅಂತ ಗುರುತಿಸೋದೇ ಇಲ್ಲ. ಆದರೆ ನಾನು ಸಂಪಾದಿಸಿರೋ ಈ seatನ್ನ ಯಾವೋನೂ ಅಲ್ಲಾಡಿಸೋಕಲ್ಲ, ಮುಟ್ಟೋಕೂ ಆಗಲ್ಲ. ಯಾಕಂದರೆ ನಾನು ಆ ಮಕ್ಕಳ ಪಾದದ ಕೆಳಗಿನಿಂದ ಬಂದೋನು. ಅದಕ್ಕಿರೋ ಶಕ್ತಿ ಅದು. Recognitionಗೆ ಕಾಯಬೇಡಿ. ಜನ ನೋಡ್ತಾರೆ, ಮಾತಾಡ್ತಾರೆ, ಈಗಾಗಲೇ ಮಾತಾಡ್ತಿದಾರೆ” ಹೀಗಂದಿದ್ದು ದೂರದ ಬೆಟ್ಟದ ಮೇಲೆಲ್ಲೊ ನೆಟ್ವರ್ಕೇ ಸಿಗದ ಜಾಗದಲ್ಲಿ ಕೂತು ನಮ್ಮ ನಾಟಕದ final ರಂಗಪಠ್ಯ ಓದುತ್ತ ಕೂತ ‘ನೆಲದ ರಾಮಯ್ಯ’


“ನನ್ನಜ್ಜ ಹುಸೇನಜ್ಜ,ಅಲ್ಲೆಲ್ಲೋ ಗೋರಿ ಒಳಗ ಮನಗವ್ನೆ. ಅವ್ನು ಆಡಿಸಿದ ಮಾತುಗಳು ಇವು. I believe ಇದರೊಳಗ ದೊಡ್ಡ ದೊಡ್ಡ ಗ್ಲೋಬಲ್ ಫಿಲಾಸಫಿಗಳು ಇದಾವೆ ಅಂತ. ಇದನ್ನೆಲ್ಲ ನೆನಪಿಟ್ಕೊಂಡು ನೀವು ಬರೆದಿಡಬೇಕು.” ಅಂತ ಜವಬ್ದಾರಿ ಕೊಟ್ಟಿದ್ದಕ್ಕೆ ಇಷ್ಟನ್ನೆಲ್ಲಾ ಬರೆದಿಡಬೇಕಾಯ್ತು. ದೊಡ್ಡ ಆಲದ ಮರವೊಂದು ಈಗಷ್ಟೇ ಜಗ ಕಾಣುತ್ತಿರುವ ಚಿಗುರುಗಳಿಗೆ ಪೊಷಕವಾಗಿ, ಬುಡ್ಡೀದೀಪದ ಬೆಳಕಾಗಿ, ಬಿಸಿಲುಗಾಲಕೆ ಮಳೆಯಾಗಿ ಹುರುಪು ತುಂಬುವುದಿದೆಯಲ್ಲಾ.. ಇದೊಂದು natural & greatest phenomenon ಅಂದ್ಕೊಂಡು ನೆಮ್ಮದಿಯಿಂದ ನಾನು ಮಲಗಿದೆ. ಆದರೆ ಅತ್ತ ಆ ಹಿರಿಯ ಜೀವ ಇನ್ನೂ ಅದೆಷ್ಟು ಹೊತ್ತು, ಆ ನಡುರಾತ್ರಿಯ ಬೆಟ್ಟದ ಮೇಗಳ ಚಳಿಯಲ್ಲಿ ಮಾಗುತ್ತಿತ್ತೋ ಏನೋ…..

ಥ್ಯಾಂಕ್ಯೂ ರಾಮಯ್ಯ ಸರ್..

Related Articles

ಇತ್ತೀಚಿನ ಸುದ್ದಿಗಳು