Wednesday, June 26, 2024

ಸತ್ಯ | ನ್ಯಾಯ |ಧರ್ಮ

ರಾಮಮಂದಿರ ನಿರ್ಮಾಣಕ್ಕೆ ಇನ್ನೂ8 ತಿಂಗಳು: ವಿಶ್ವಪ್ರಸನ್ನ ತೀರ್ಥರು

ಲಖನೌ : ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣ ಸಿದ್ದತೆಗಳು ಬರದಿಂದ ಸಾಗುತ್ತಿದ್ದು, ಇನ್ನು ಎಂಟು ತಿಂಗಳಲ್ಲಿ ಗರ್ಭಗುಡಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಶ್ರೀರಾಮಮಂದಿರ ನಿರ್ಮಾಣ ಲೋಕಾರ್ಪಣೆಗೊಳ್ಳಲು ಸಿದ್ಧತೆಗಳು ನಡೆಯುತ್ತಿದ್ದು, ಕಾರ್ಯಗಳು ಯಾವ ಹಂತದಲ್ಲಿವೆ, ಶ್ರೀರಾಮದೇವರ ವಿಗ್ರಹ ಹೇಗಿರಲಿದೆ, ಮುಂತಾದ ವಿವರಗಳನ್ನು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹಂಚಿಕೊಂಡಿದ್ದಾರೆ.

ʼಮಂದಿರದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ. ಭೂ ಮಟ್ಟದಿಂದ ಸುಮಾರು 17 ಅಡಿ ಎತ್ತರದ ತನಕ ಬಂದಿದ್ದು, ವಿಗ್ರಹ ಪ್ರತಿಷ್ಠಾಪನೆ ನಡೆಯಬೇಕು ಆ ಮಟ್ಟಕ್ಕೆ ಪೀಠದ ರಚನೆ ಆಗಿದೆ. ಇನ್ನೂ ಕಂಬಗಳನ್ನು ನಿಲ್ಲಿಸಿ ಗೋಡೆಗಳನ್ನು ಎಬ್ಬಿಸುವ ಕಾರ್ಯವಾಗಬೇಕು. ಶ್ರೀರಾಮಚಂದ್ರನ ಮೈಬಣ್ಣ ನೀಲ ಎಂದು ಅದಕ್ಕೆ ಒಪ್ಪುವಂತ ಅಮೃತಶಿಲೆಯಲ್ಲಿ ನೀಲಿ ಬಣ್ಣದ ಶಿಲೆ ನಿರ್ಮಾಣವಾಗಬೇಕು ಎಂದು ಎಲ್ಲರ  ಒಮ್ಮತದ ಮೇರೆಗೆ ಶಿಲೆಗೋಸ್ಕರ ಹುಡುಕಾಟ ನಡೆಯುತ್ತಿದೆ. ಇನ್ನು ಎಂಟು ತಿಂಗಳಲ್ಲಿ ಗರ್ಭಗುಡಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು