Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಮನಗರ: ಹೈವೇ ಅಪಘಾತದಲ್ಲಿ ಚಿರತೆ ಸಾವು

ರಾಮನಗರ: ಬೆಂಗಳೂರು-ಮೈಸೂರು ನಡುವಿನ ಹೊಸ ಹೆದ್ದಾರಿಯ ಬಳಿ ನಡೆದ ಅಪಘಾತವೊಂದರಲ್ಲಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಹೆದ್ದಾರಿಯ ತಡೆಗೋಡೆಯ‌ನ್ನು ಹಾರಿ ಚಿರತೆ ರಸ್ತೆಗೆ ಬಂದಾಗ ವೇಗವಾಗಿ ಚಲಿಸುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಸಮೀಪದ ಅರಣ್ಯದಿಂದ ಚಿರತೆ ಅಲ್ಲಿಗೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಹೆದ್ದಾರಿಯಲ್ಲಿ ಓಡಾಡುತ್ತಿದ್ದ ಜನರು ವಾಹನಗಳನ್ನು ನಿಲ್ಲಿಸಿ ಮೃತ ಚಿರತೆಯನ್ನು ನೋಡಲು ಕುತೂಹಲದಿಂದ ನೆರೆದಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.‌

Related Articles

ಇತ್ತೀಚಿನ ಸುದ್ದಿಗಳು