Monday, June 17, 2024

ಸತ್ಯ | ನ್ಯಾಯ |ಧರ್ಮ

ವಿರಾಟ್ ಕೊಹ್ಲಿ ವಿರುದ್ಧ ಮಾತಾಡಿದ ಸೂಲಿಬೆಲೆ: ನೆಟ್ಟಿಗರಿಂದ ಆಕ್ರೋಶ

ನಿನ್ನೆ ನಡೆದ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇನ್ನೇನು ಸೋಲಿನ ಸುಳಿಯಲ್ಲಿ ಬಿತ್ತು ಎಂಬ ಹಂತದಲ್ಲೇ ‘ಆಪತ್ಭಾಂಧವ’ನಂತೆ ಬಂದ ವಿರಾಟ್ ಕೊಹ್ಲಿ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದ್ದು ಯಾರೂ ಕೂಡ ಮರೆಯುವಂತದ್ದಲ್ಲ. ಇಂತಹ ಅದೆಷ್ಟೋ ರೋಚಕಗಳನ್ನು ವಿರಾಟ್ ಕೊಹ್ಲಿ ನಿರ್ವಹಿಸಿದ್ದು ಈಗ ಇತಿಹಾಸ.

ದೀಪಾವಳಿ ಹಿನ್ನೆಲೆಯಲ್ಲಿ ಈ ಒಂದು ಸಂಭ್ರಮವನ್ನು ಇಡೀ ಭಾರತೀಯರು ಸಂಭ್ರಮಿಸುತ್ತಿದ್ದರೆ, ಇತ್ತ ಬಲಪಂಥೀಯ ಸಿದ್ಧಾಂತದ ಪ್ರತಿಪಾದಕ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿ ವಿರಾಟ್ ಕೊಹ್ಲಿಯನ್ನೇ ಸಿದ್ಧಾಂತದ ಅಡಿಯಲ್ಲಿ ಅಣಕಿಸಿ ಟೀಕಿಸಿ ಬರೆದ ಟ್ವಿಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಬಗ್ಗೆ ಬರೆದ ಟ್ವಿಟ್ ನಲ್ಲಿ ‘ವಿರಾಟ್ ಕೊಹ್ಲಿಯವರಿಗೆ ಭಾರತವನ್ನು ಗೆಲ್ಲಿಸಿದ್ದಕ್ಕೆ ಅಭಿನಂದನೆಗಳು, ಆದರೆ ಇದನ್ನು ಸಂಭ್ರಮಿಸುವುದು ಹೇಗೆ? ನೀವು ಪಟಾಕಿ ಹೊಡೆಯದಂತೆ ಸೂಚಿಸಿದ್ದೀರಿ’ ಎಂದು ಉಲ್ಲೇಖಿಸಿ ಮಾಡಿದ ಟ್ವಿಟ್ ನಲ್ಲಿ ಹೆಚ್ಚು ಮಂದಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಹಿರಿಯ ಕ್ರಿಕೆಟ್ ಆಟಗಾರ ಕರ್ನಾಟಕದ ದೊಡ್ಡ ಗಣೇಶ್ ಕೂಡ ಚಕ್ರವರ್ತಿ ಸೂಲಿಬೆಲೆಯ ಈ ಟ್ವಿಟ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದು “ದಯವಿಟ್ಟು ಸಂಭ್ರಮಾಚರಣೆಯಲ್ಲಿ ಇವೆಲ್ಲಾ ಬೇಡ. ಇದನ್ನೆಲ್ಲಾ ಬದಿಗಿಡಿ. ಭಾರತದ ಐತಿಹಾಸಿಕ ಗೆಲುವಿನ ಸಂಭ್ರಮವನ್ನಷ್ಟೇ ಆಚರಿಸೋಣ” ಎಂದು ಚಕ್ರವರ್ತಿ ಸೂಲಿಬೆಲೆಗೆ ಬುದ್ಧಿ ಹೇಳಿದ್ದಾರೆ.

ಕೆಲವು ಪ್ರತಿಕ್ರಿಯೆಗಳು ಚಕ್ರವರ್ತಿ ಸೂಲಿಬೆಲೆ ಈ ಹಿಂದೆ ತಮ್ಮ ಭಾಷಣದಲ್ಲಿ ಹೇಳಿದ ಸುಳ್ಳುಗಳನ್ನೇ ತಗೆದುಕೊಂಡು ಅವರನ್ನು ಟೀಕಿಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಬುಲೆಟ್ ಟ್ರೈನ್ ಬಗ್ಗೆ ಮಾಡಿದ ಭಾಷಣವನ್ನು ನೆನಪಿಸುವಂತೆ ಮತ್ತೊಂದು ಪ್ರತಿಕ್ರಿಯೆ ಬಂದಿದೆ.

https://twitter.com/gs_g8771/status/1584213100458188800?t=AGLlfKUSgnb6j5FWLM8NWg&s=19

ಇನ್ನೂ ಕೆಲವರು ಚಕ್ರವರ್ತಿ ಸೂಲಿಬೆಲೆಯ ಅವಿವಾಹಿತ ಎಂದು ನಮೂದಿಸಿದ ಮದುವೆ ಆಗಿದ್ದು, ಆಗ ನಿಮಗೆ ತೃಪ್ತಿ ಆದರೂ ಸಿಗಬಹುದು ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

https://twitter.com/Truthsp30049061/status/1584169939002626049?t=Tob4zjUqkSGr6cvunJoqbg&s=19

ಇದು ನಿಜವಾದ ದೇಶವಿರೋಧಿ ನಡೆ. ಕೇವಲ ಅಭಿನಂದನೆ ಒಂದು ಹೇಳಿ ಮುಗಿಸಬಹುದಿತ್ತು. ಆದರೆ ಭಾರತದ ಸಂಭ್ರಮದ ಸಿದ್ಧಾಂತದ ಅಡಿಯಲ್ಲಿ ತುರುಕಿ ಕೊಹ್ಲಿಯನ್ನು ಪ್ರಶ್ನಿಸಿದ ಸೂಲಿಬೆಲೆ ನಿಜವಾದ ದೇಶದ್ರೋಹಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚಕ್ರವರ್ತಿ ಸೂಲಿಬೆಲೆ ಮಾಡಿದ ಟ್ವಿಟ್ ನಲ್ಲಿ ಹಲವಷ್ಟು ಮಂದಿ ಸೂಲಿಬೆಲೆ ನಡೆಯನ್ನು ಟೀಕಿಸಿ ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು