Sunday, March 30, 2025

ಸತ್ಯ | ನ್ಯಾಯ |ಧರ್ಮ

RBI ನಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ; ಎಟಿಎಂ ವಿತ್ ಡ್ರಾ ಶುಲ್ಕ 23 ರೂಪಾಯಿಗೆ ಏರಿಕೆ

ಮೇ 1 ರಿಂದ ಉಚಿತ ಮಾಸಿಕ ಬಳಕೆಯನ್ನು ಮೀರಿ ಎಟಿಎಂ ನಗದು ಹಿಂಪಡೆಯುವಿಕೆ (ವಿತ್ ಡ್ರಾ) ಶುಲ್ಕವನ್ನು ಪ್ರತಿ ವಹಿವಾಟಿಗೆ 2 ರೂ.ಗಳಿಂದ 23 ರೂ.ಗೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಘೋಷಿಸಿದೆ. ಈ ಆದೇಶವನ್ನು ಎಲ್ಲಾ ಬ್ಯಾಂಕುಗಳು ಅನುಸರಿಸಬೇಕು ಎಂದು ತಿಳಿಸಿದೆ.

ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್  ಎಟಿಎಂ ಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಆರ್ಥಿಕೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ. ಅದರ ಹೊರತಾಗಿ ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಆರ್ಥಿಕೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿದ್ದಾರೆ – ಮೆಟ್ರೋ ಕೇಂದ್ರಗಳಲ್ಲಿ ಮೂರು ವಹಿವಾಟುಗಳು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ ಐದು ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ.

“ಉಚಿತ ವಹಿವಾಟುಗಳನ್ನು ಮೀರಿ, ಗ್ರಾಹಕರಿಗೆ ಪ್ರತಿ ವಹಿವಾಟಿಗೆ ಗರಿಷ್ಠ 23 ರೂ.ಶುಲ್ಕ ವಿಧಿಸಬಹುದು. ಇದು ಮೇ 1, 2025 ರಿಂದ ಜಾರಿಗೆ ಬರಲಿದೆ ಎಂದು ಆರ್ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಜನಸಾಮಾನ್ಯರಿಗೆ ಎದುರಾಗಿರುವ ಆರ್ಥಿಕ ಸಂಕಷ್ಟದ ಹೊರೆಯ ನಡುವೆ ಜನಸಾಮಾನ್ಯರಿಗೆ RBI ತಂದಿರುವ ಈ ನೀತಿ ಮತ್ತಷ್ಟು ಬರೆ ಎಳೆದಂತಾಗಿದೆ. ಕೇವಲ ಎಟಿಎಂ ವಿತ್ ಡ್ರಾ ಅಷ್ಟೇ ಅಲ್ಲದೆ ನಗದು ಮರುಬಳಕೆ ಯಂತ್ರಗಳಲ್ಲಿ (ನಗದು ಠೇವಣಿ ವಹಿವಾಟುಗಳನ್ನು ಹೊರತುಪಡಿಸಿ) ಮಾಡಿದ ವಹಿವಾಟುಗಳಿಗೂ ಈ ಸೂಚನೆಗಳು ಅನ್ವಯವಾಗುತ್ತವೆ ಎಂದು ಆರ್ಬಿಐ ತಿಳಿಸಿದೆ.

ಇನ್ನು ಎಟಿಎಂ ಬಳಕೆ ಶುಲ್ಕ ಹೆಚ್ಚಿಸಲು ಸ್ಪಷ್ಟ ಕಾರಣವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಈವರೆಗೆ ನೀಡಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page