Tuesday, January 27, 2026

ಸತ್ಯ | ನ್ಯಾಯ |ಧರ್ಮ

ಉತ್ತರಪ್ರದೇಶದಲ್ಲಿ ಆರಂಭವಾಯಿತು”ರೆಡ್ ರಮ್”

ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಲಾಂಛನದಲ್ಲಿ ಅಶೋಕ್ ದೇವನಾಂಪ್ರಿಯ, ಕಿಶೋರ್ ಎ. ವಿಜಯ್ ಕುಮಾರ್ ಹಾಗೂ ಹನಿ ಚೌಧರಿ ನಿರ್ಮಾಣದ “ರೆಡ್ ರಮ್” ಚಿತ್ರದ ಮುಹೂರ್ತ ಸಮಾರಂಭ ಉತ್ತರ ಪ್ರದೇಶದ, ಮೋದಿನಗರದ ದೇವಸ್ಥಾನದಲ್ಲಿ ನೆರವೇರಿತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೋದಿ ನಗರದ ಶಾಸಕರಾದ ಶ್ರೀಮತಿ ಮಂಜು ಶಿವಾಚ್, ಸ್ಥಳೀಯ ಕೌನ್ಸಿಲರ್ ರಾಜಕುಮಾರಿ ಮುನ್ನಿ ಜಿ ಹಾಗೂ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ರೆಡ್ ರಮ್” ಚಿತ್ರವನ್ನು  ಆರ್. ಪ್ರಮೋದ್ ಜೋಯಿಸ್ ನಿರ್ದೇಶಿಸುತ್ತಿದ್ದಾರೆ. ಶಿವಶಂಕರ್ (ಶಂಖು) ಛಾಯಾಗ್ರಹಣ ಹಾಗೂ ಆರ್. ಚೇತನ್ ಕೃಷ್ಣ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸಿನಿಮಾ ಕುರಿತು ಮಾಹಿತಿ ನೀಡಿದ ಅಫ್ಜಲ್, ಸುಮಾರು 20 ದಿನಗಳ ಕಾಲ ಉತ್ತರಪ್ರದೇಶದ ಸುತ್ತಾ ಮುತ್ತಾ ಚಿತ್ರೀಕರಣ ನಡೆಯಲಿದೆ. ಉಳಿದ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುವ ಯೋಜನೆಯಿದೆ ಎಂದು ಚಿತ್ರತಂಡದ ಪರವಾಗಿ ಮಾಹಿತಿ ನೀಡಿದ್ದಾರೆ.

ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಹಿಂದೆಂದೂ ಕೇಳಿರದಂತಹ ಕಥೆಯ ಅನಾವರಣ ಈ ಚಿತ್ರದಲ್ಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರದ ಮುಖಾಂತರ ಕೊಡಗಿನ ಬೆಡಗಿ ಮಧುರಾ ಹಾಗೂ ಪ್ರಾಚಿ ಶರ್ಮ (ಮುಂಬೈ) ಇಬ್ಬರು ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.

ಬಾಲಿವುಡ್ ನಟ  ರಾಜ್ ವೀರ್, ಮಧುರಾ, ಅಫ್ಜಲ್ , ಶ್ರೀದತ್ತಾ, ಪ್ರಾಚಿ ಶರ್ಮ, ಧ್ರಿತೇಶ್ ವಿನಯ್ ಸೂರ್ಯ ಹಾಗೂ ಯತಿರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page