Tuesday, June 18, 2024

ಸತ್ಯ | ನ್ಯಾಯ |ಧರ್ಮ

ʼಭಾರತ್‌ ಜೋಡೋ ಯಾತ್ರೆಗೆʼ ದೇಣಿಗೆ ನಿರಾಕರಣೆ: ಅಂಗಡಿ ಮಾಲೀಕನ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರ ದಬ್ಬಾಳಿಕೆ

ಕೇರಳ : ಭಾರತ್‌ ಜೋಡೋ ಯಾತ್ರೆಯ ನಿಧಿ ಸಂಗ್ರಹಕ್ಕೆ 2000 ರೂ. ನೀಡದಿದ್ದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಅಂಗಡಿ ಬಂದು ʼಭಾರತ್‌ ಜೋಡೋ ಯಾತ್ರೆಗೆʼ ದೇಣಿಗೆ ಕೇಳಿದ ಕಾರಣ, ಅಂಗಡಿ ಮಾಲೀಕ 500 ರೂ ನೀಡಲು ಮುಂದಾಗಿದ್ದಾನೆ, ಆದರೆ ಅದನ್ನು ತಿರಸ್ಕರಿಸಿದ ಕಾರ್ಯಕರ್ತರು 2000 ರೂಪಾಯಿ ದೇಣಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟು ಹಣ ಕೊಡದ ಕಾರಣ ಅಂಗಡಿ ಮಾಲೀಕನಿಗೆ ಅವಾಚ್ಯ ಪದಗಳನ್ನು ಬಳಸಿದ್ದಾರೆ. ನಂತರ ಅಂಗಡಿಯಲ್ಲಿದ್ದ ತೂಕದ ಯಂತ್ರವನ್ನು ಹಾನಿಗೊಳಿಸಿ, ತರಕಾರಿಗಳನ್ನು ಬಿಸಾಡಿದ್ದಾರೆ.

ಅಂಗಡಿ ಮಾಲೀಕ ಎಸ್.ಫವಾಜ್‌

ಈ ಹಿನ್ನಲೆ ಅಂಗಡಿ ಮಾಲೀಕ ಎಸ್.ಫವಾಜ್‌, ಕುನ್ನಿಕೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್‌ 447 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು