Tuesday, December 24, 2024

ಸತ್ಯ | ನ್ಯಾಯ |ಧರ್ಮ

ಹೆಸರಾಂತ ಸಿನೆಮಾ ನಿರ್ದೇಶಕ ಶ್ಯಾಮ್ ಬೆನಗಲ್ ಇನ್ನಿಲ್ಲ

ಭಾರತೀಯ ಚಿತ್ರರಂಗದ ಹೆಸರಾಂತ ಚಿತ್ರಕರ್ಮಿ, ನಿರ್ದೇಶಕ ಶ್ಯಾಮ್ ಬೆನಗಲ್ ಇಂದು ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅಮೋಘವಾದ ಸಿನೆಮಾಗಳನ್ನು ಕೊಟ್ಟು, ಅಪ್ರತಿಮ ನಿರ್ದೇಶಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಂತ ವ್ಯಕ್ತಿ ಶ್ಯಾಮ್ ಬೆನಗಲ್ ಇನ್ನು ನೆನಪು ಮಾತ್ರ.

90 ವರ್ಷ ವಯಸ್ಸಿನ ಶ್ಯಾಮ್ ಬೆನಗಲ್ ಕಳೆದ 10 ವರ್ಷಗಳಿಂದ ಚಿತ್ರರಂಗದಿಂದ ದೂರವವೇ ಉಳಿದಿದ್ದರು. ಇತ್ತೀಚಿಗೆ ವಯೋಸಹಜ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನಿರಂತರ ಡಯಾಲಿಸಿಸ್ ಗೆ ಒಳಗಾಗಿದ್ದರು. ಎರಡು ಕಿಡ್ನಿ ಫೇಲಾದ ಹಿನ್ನೆಲೆ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಮನೆಯಲ್ಲಿಯೇ ಡಯಾಲಿಸಿಸ್‌ಗೆ ಶ್ಯಾಮ್ ಬೆನಗಲ್ ಒಳಗಾಗುತ್ತಿದ್ದರು.

ಡಿಸೆಂಬರ್ 14 1934ರಂದು ಹೈದ್ರಾಬಾದ್‌ನಲ್ಲಿ ಜನಿಸಿದ್ದ ಶ್ಯಾಮ್ ಬೆನಗಲ್, ಕಳೆದ ಡಿಸೆಂಬರ್ 14ರಂದು 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವಿಶೇಷ ಸಂದರ್ಭದಲ್ಲಿ ಶಬಾನಾ ಅಜ್ಮಿ ಸೇರಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ಶುಭ ಹಾರೈಸಿದ್ದರು. ನಾಸಿರುದ್ದೀನ್ ಶಾ, ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾಡ್ ಅವರಂತಹ ಕ್ಲಾಸಿಕ್ ತಾರೆಯರನ್ನು ಚಿತ್ರರಂಗದಲ್ಲಿ ಬೆಳೆಸಿದ ಕೀರ್ತಿ ಶ್ಯಾಮ್ ಬೆನಗಲ್ ಅವರಿಗೆ ಸಲ್ಲುತ್ತದೆ.

ಅಂಕುರ್, ನಿಶಾಂತ್, ಮಂಥನ್, ಜುನೂನು, ಕಲಿಯುಗ್ ನಂತಹ ಹೀಗೆ ಒಂದಕ್ಕಿಂತೊಂದು ಶ್ರೇಷ್ಠ ಚಿತ್ರಗಳನ್ನು ನೀಡಿದ್ದ ಶ್ಯಾಮ್ ಬೆನಗಲ್ ಹಲವು ತಾರೆಯರಿಗೆ ಗುರುವಾಗಿ ನಿಂತರು. ಶ್ಯಾಮ್ ಬೆನಗಲ್ ನಿರ್ದೇಶನದ ಮೊದಲ ಚಿತ್ರ ಅಂಕುರ್‌ ದಲ್ಲಿ ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಶಬಾನಾ ಅಜ್ಮಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ವಿಶೇಷ ಅಂದರೆ ಇವರ ಈ ಮೊದಲ ಪ್ರಯತ್ನಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page