Wednesday, August 20, 2025

ಸತ್ಯ | ನ್ಯಾಯ |ಧರ್ಮ

ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಒದ್ದಿದ್ದರಿಂದ ಸಾವು: ಮರಣೋತ್ತರ ವರದಿಯಿಂದ ಬಹಿರಂಗ

ಬೆಂಗಳೂರು: ಚಿತ್ರನಟ ದರ್ಶನ್ ಹಾಗೂ ಆತನ ಅನುಯಾಯಿಗಳಿಂದ ಹಲ್ಲೆಗೊಳಲಾಗಿ ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿಯವರ ಮರಣೋತ್ತರ ವರದಿ ಬಹಿರಂಗಗೊಂಡಿದ್ದು, ಅದರಲ್ಲಿ ರೇಣುಕಾಸ್ವಾಮಿಯ ಗುಪ್ತಾಂಗದ ಮೇಲೆ ದರ್ಶನ್‌ ಒದೆತದಿಂದ ಬಿದ್ದಿರುವ ತೀವ್ರವಾದ ಹೊಡೆತಗಳಿಂದಲೇ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ, ತನ್ನ ಗೆಳತಿಗೆ ಅಶ್ಲೀಲ ಮೇಸೆಜ್‌ ಮಾಡುತ್ತಿದ್ದ ಎಂದು ಆರೋಪಿಸಿ ನಟ ದರ್ಶನ ಮತ್ತು ಆತನ ಅನುಯಾಯಿಗಳು ರೇಣುಕಾಸ್ವಾಮಿಯನ್ನು ಕರೆತಂದು ಚಿತ್ರಹಿಂಸೆ ನೀಡಿದ್ದರಿಂದ ಆತ ಸಾವಿಗೀಡಾಗಿದ್ದ ಎನ್ನಲಾಗಿದೆ. ರೇಣುಕಾಸ್ವಾಮಿಯವರ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೀಡಾಗಿದ್ದಾರೆ. ಅದರಲ್ಲೂ ದರ್ಶನ್ ಅವರು ಮರ್ಮಾಂಗಕ್ಕೆ ಹೊಡೆದಿದ್ದರಿಂದಲೇ ಆತನ ಪ್ರಾಣ ಹೋಗಿದೆ ಎಂದು ಹೇಳಲಾಗಿದೆ. ಆದರೆ, ದರ್ಶನ್ ಕಡೆಗಿನ ವಾದದಲ್ಲಿ ದರ್ಶನ್ ಹೊಡೆದಿದ್ದರಿಂದ ಆತ ಸತ್ತಿಲ್ಲ ಎನ್ನುವ ವಾದ ಕೇಳಿ ಬರುತ್ತಿದೆ.

ಈ ಎಲ್ಲಾ ಕಾರಣಗಳಿಗಾಗಿ, ರೇಣುಕಾ ಸ್ವಾಮಿಯವರ ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ಅದು ಈಗ ಬಹಿರಂಗಗೊಂಡಿದೆ. ಮರ್ಮಾಂಗಕ್ಕೆ ಬಿದ್ದ ಪೆಟ್ಟು ಹಾಗೂ ಅದರಿಂದಾದ ರಕ್ತಸ್ರಾವದಿಂದಲೇ ಆತ ಸಾವಿಗೀಡಾಗಿರುವ ಬಗ್ಗೆ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page