Thursday, June 27, 2024

ಸತ್ಯ | ನ್ಯಾಯ |ಧರ್ಮ

ರೆಪೋ ದರ ಏರಿಸಿದ ರಿಸರ್ವ್ ಬ್ಯಾಂಕ್, ಚೇತರಿಸಿಕೊಂಡ ಶೇರು ಮಾರುಕಟ್ಟೆ

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಪ್ರಮುಖ ಸಾಲದ ದರವನ್ನು 0.50ರಷ್ಟು ಹೆಚ್ಚಿಸುವುದರೊಂದಿಗೆ ಹಣದುಬ್ಬರವನ್ನು ನಿಯಂತ್ರಿಸುವ ಕ್ರಮಕ್ಕೆ ಕೈಹಾಕಿದೆ.

ರೆಪೋ ದರವನ್ನು ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ. ಶೇ.7ರಷ್ಟಿರುವ ಹಣದುಬ್ಬರವು ರಿಸರ್ವ್ ಬ್ಯಾಂಕ್ ನಿಗದಿಪಡಿಸಿರಿಸಿಕೊಂಡಿರುವ ಮಧ್ಯಮ ಅವಧಿಯ ಗುರಿಗಿಂತ ಹೆಚ್ಚಾಗಿರುವುದರಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ವಿತ್ತೀಯ ನೀತಿ ಸಮಿತಿ (ಎಂಪಿಸಿ) ಪ್ರಮುಖ ಸಾಲದ ದರ ಅಥವಾ ರೆಪೋ ದರವನ್ನು 0.50ಯಷ್ಟು ಏರಿಸುವುದರಿಂದ (ಬಿಪಿಎಸ್) ಈಗ ಅದು 5.40 ಕ್ಕೆ ಏರಿಕೆಯಾಗಿದೆ. ಈ ಏರಿಕೆಯಿಂದಾಗಿ ಬ್ಯಾಂಕ್‌ಗಳು ಪಡೆಯುವ ಅಲ್ಪಾವಧಿ ಸಾಲದ ದರವು ಕೋವಿಡ್ ಸಾಂಕ್ರಾಮಿಕ ಪೂರ್ವದ ಶೇಕಡಾ 5.15 ಅನ್ನು ದಾಟಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಆರು ಸದಸ್ಯರು ದರ ಏರಿಕೆಗೆ ಒಮ್ಮತದಿಂದ ಮತ ಚಲಾಯಿಸಿದರು.

ರೆಪೋ ದರ ಏರಿಕೆಯ ಬೆನ್ನಲ್ಲೇ ಶೇರುಮಾರುಕಟ್ಟೆ ಗಣನೀಯ ಚೇತರಿಕೆ ಕಂಡುಕೊಂಡಿದೆಯಲ್ಲದೆ, ಡಾಲರ್ ಎದುರಿಗೆ ರುಪಾಯಿ ದರದಲ್ಲೂ ಏರಿಕೆ ಕಂಡುಬಂದಿದೆ.

ರೆಪೋ ದರ ಏರಿಕೆಯಿಂದಾಗಿ ವಾಹನ, ಮನೆ ಮತ್ತು ಇತರ ಸಾಲಗಳ ಬಡ್ಡಿದರ ಏರಿಕೆಯಾಗುವ ಸಂಭವವಿದೆ.

Related Articles

ಇತ್ತೀಚಿನ ಸುದ್ದಿಗಳು