Friday, June 14, 2024

ಸತ್ಯ | ನ್ಯಾಯ |ಧರ್ಮ

75ಕ್ಕೆ ನಿವೃತ್ತಿಯಾಗಬೇಕೆನ್ನುವುದು ಬಿಜೆಪಿಯಲ್ಲಿ ಕಡ್ಡಾಯವೇನಲ್ಲ: ರಾಜನಾಥ್‌ ಸಿಂಗ್

ಲೋಕಸಭಾ ಚುನಾವಣೆಯ ನಡುವೆ ಮೋದಿ ಈ ಬಾರಿ ನಿವೃತ್ತಿ ಹೊಂದಲಿದ್ದಾರೆಯೇ ಎನ್ನುವ ಕುರಿತಾಗಿಯೂ ಪ್ರಶ್ನೆ ಎದ್ದಿತ್ತು. ಅವರು 75 ವರ್ಷದ ಹೊಸ್ತಿಲಿನಲ್ಲಿ ಇರುವುದರಿಂದಾಗಿ ಬಿಜೆಪಿಯ ನಿಯಮದಂತೆ ನಿವೃತ್ತಿ ಹೊಂದಲಿದ್ದಾರೆನ್ನುವ ಗುಸುಗುಸು ಇತ್ತು.

ಈ ಚರ್ಚೆಯ ನಡುವೆಯೇ ಈ ವಿಷಯದ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ. ಅವರು ಈ ಕುರಿತು ಮಾತನಾಡುತ್ತಾ “ಈ ಮಾತು ಸಂಪೂರ್ಣವಾಗಿ ತರ್ಕಬದ್ಧವಲ್ಲ. ವಯಸ್ಸಿನ ಬಗ್ಗೆ ಚರ್ಚೆ ನಡೆದಾಗ ನಾನು ಬಿಜೆಪಿ ಅಧ್ಯಕ್ಷನಾಗಿದ್ದೆ. ಬಿಜೆಪಿ ಸಂವಿಧಾನದಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ. ನಾವು 75 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಕೆಲಸ ಮಾಡುವವರಿಗೆ ಯಾವುದೇ ನಿರ್ಬಂಧ ಏಕೆ ಇರಬೇಕು” ಎಂದರು.

ಈ ಹಿಂದೆ ಹಲವು ರಾಜಕಾರಣಿಗಳನ್ನು ವಯಸ್ಸಿನ ಕಾರಣ ಕೊಟ್ಟು ರಾಜಕೀಯದಿಂದ ನಿವೃತ್ತಿಗೊಳಿಸಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅಡ್ವಾಣಿ, ಯಡಿಯೂರಪ್ಪ, ಮನೋಹರ್‌ ಜೋಷಿ ಅವರಲ್ಲಿ ಕೆಲವರು.

ಮುಂದುವರೆದು ಮಾತನಾಡಿದ ಅವರು “ನಾವು ಲೋಕಸಭೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳ ಗುರಿಯತ್ತ ಸಾಗುತ್ತಿದ್ದೇವೆ. ಪ್ರತಿಪಕ್ಷಗಳ ಮತದಾರರ ನೆಲೆಯು ಭ್ರಮನಿರಸನಗೊಂಡಿದೆ ಮತ್ತು ಅವರು ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲ ಎಂಬ ಅಂಶದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ” ಎಂದು ಹೇಳಿದರು.

“ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ, ಛತ್ತೀಸ್ ಗಢವನ್ನು ಗೆಲ್ಲುತ್ತೇವೆ, ಕೇರಳದಲ್ಲಿ ನಮ್ಮ ಖಾತೆಯನ್ನು ತೆರೆಯುತ್ತಿದ್ದೇವೆ, ತಮಿಳುನಾಡಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಆಂಧ್ರದಲ್ಲಿ ಲಾಭ ಗಳಿಸುತ್ತಿದ್ದೇವೆ.” ಎಂದು ಅವರು ಹೇಳಿದರು.

ಪ್ರತಿಪಕ್ಷಗಳು ವಿಭಜಕ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ರಾಜಕೀಯದ ಉದ್ದೇಶ ಸರ್ಕಾರ ರಚನೆಯಲ್ಲ. ಇದು ರಾಷ್ಟ್ರ ನಿರ್ಮಾಣ. ನಾನು ಇದ್ದಾಗ ಕಾಂಗ್ರೆಸ್ ಏಕೆ ಜಾತಿ ಗಣತಿ ನಡೆಸಲಿಲ್ಲ ಎಂದು ಕೇಳಿದರು.

Related Articles

ಇತ್ತೀಚಿನ ಸುದ್ದಿಗಳು