ದೆಹಲಿ: ಪ್ರಮುಖ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಅಧಿಕೃತ ಟ್ವಿಟರ್ (ಎಕ್ಸ್) ಖಾತೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಲೀಗಲ್ ಡಿಮಾಂಡ್ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆದರೆ, ರಾಯಿಟರ್ಸ್ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಘೋಷಣೆ ಮಾಡಿಲ್ಲ. ಆದರೆ ಲೀಗಲ್ ಡಿಮಾಂಡ್ ಕಾರಣಕ್ಕಾಗಿ ಭಾರತದಲ್ಲಿ ಎಕ್ಸ್ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.
ರಾಯಿಟರ್ಸ್ ಎಕ್ಸ್ ಖಾತೆಯನ್ನು ನಿರ್ಬಂಧಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಆದರೆ ರಾಯಿಟರ್ಸ್ ಟೆಕ್ ನ್ಯೂಸ್, ರಾಯಿಟರ್ಸ್ ಫ್ಯಾಕ್ಟ್ ಚೆಕ್, ರಾಯಿಟರ್ಸ್ ಪಿಕ್ಚರ್ಸ್, ರಾಯಿಟರ್ಸ್ ಏಷ್ಯಾ ಮತ್ತು ರಾಯಿಟರ್ಸ್ ಚೀನಾದಂತಹ ರಾಯಿಟರ್ಸ್ ಸಂಸ್ಥೆಗೆ ಸಂಬಂಧಿಸಿದ ಇತರ ಎಕ್ಸ್ ಖಾತೆಗಳು ಭಾರತದಲ್ಲಿ ಗೋಚರಿಸುತ್ತಿರುವುದು ಗಮನಾರ್ಹ.
ರಾಯಿಟರ್ಸ್ ಥಾಮ್ಸನ್ ರಾಯಿಟರ್ಸ್‌ನ ಸುದ್ದಿ ಮತ್ತು ಮಾಧ್ಯಮ ವಿಭಾಗವಾಗಿದೆ. ಕಂಪನಿಯು ವಿಶ್ವಾದ್ಯಂತ 2,600 ಪತ್ರಕರ್ತರನ್ನು ನೇಮಿಸಿಕೊಂಡಿದೆ.
ಅಪ್ಡೇಟ್: ಇತ್ತೀಚಿನ ಸುದ್ದಿಗಳ ಪ್ರಕಾರ ಎಕ್ಸ್ ಸಂಸ್ಥೆ ನಂತರ ರಾಯಿಟರ್ಸ್ ಸಂಸ್ಥೆಯ ಖಾತೆಯನ್ನು ಮರುಸ್ಥಾಪನೆ ಮಾಡಿದೆ.