Sunday, June 16, 2024

ಸತ್ಯ | ನ್ಯಾಯ |ಧರ್ಮ

ರೇವಣ್ಣ ಕುಟುಂಬ ಟೆನ್ಷನ್, ಕುಮಾರಣ್ಣ ಕುಟುಂಬ ಜಾಲಿ ಮೋಡ್

ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಪ್ರಕರಣ ಬಿಸಿ ಏರುತ್ತಿದ್ದಂತೆ ಪಕ್ಷ ಮತ್ತು ಕುಟುಂಬದ ಅಸ್ತಿತ್ವ ಉಳಿಸಿಕೊಳ್ಳಲು ನಿರಂತರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕುಟುಂಬವನ್ನು ಸಮರ್ಥಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಈಗ ಪ್ರಜ್ವಲ್ ರೇವಣ್ಣ ಬೆಂಗಳೂರು ಬರುವುದು ಖಾತ್ರಿಯಾಗುತ್ತಿದ್ದಂತೆಯೇ ಪ್ರಕರಣದಿಂದ ಮತ್ತು ರೇವಣ್ಣ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಇಂದು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಗೆ ಸಂಸಾರ ಸಮೇತರಾಗಿ ಜಾಲಿ ಮೂಡ್ ನಲ್ಲಿದ್ದ ಕುಮಾರಸ್ವಾಮಿ, ತಮ್ಮ ಕುಟುಂಬದ ಸಮೇತ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಾ, ಪತ್ನಿ ಅನಿತಾ, ಪುತ್ರ ನಿಖಿಲ್ ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಂದಿಗೆ ಫ್ಯಾಮಿಲಿ ಟೈಂ ಕಳೆಯುತ್ತಿದ್ದಾರೆ.

ಇತ್ತ ಅಣ್ಣನ ಮಗ ಪ್ರಜ್ವಲ್‌ ರೇವಣ್ಣ ಯಾವ ಕ್ಷಣದಲ್ಲಾದರೂ ಅರೆಸ್ಟ್‌ ಆಗಬಹುದು ಎಂದು ರೇವಣ್ಣ ಕುಟುಂಬ ಕ್ಷಣಕ್ಷಣಕ್ಕೂ ಒತ್ತಡಕ್ಕೆ ಸಿಕ್ಕು ಒದ್ದಾಡ್ತಿದ್ರೆ, ಇತ್ತ ಕುಮಾರಸ್ವಾಮಿ ಕುಟುಂಬ ಮಾತ್ರ ಯಾವುದೇ ಟೆನ್ಷನ್‌ ಇಲ್ಲದೇ ಜಾಲಿ ಮೂಡ್ ಗೆ ಬಿದ್ದಿರುವುದು ಕುಟುಂಬ ಮತ್ತು ಪಕ್ಷದ ಹಿನ್ನೆಲೆಯಲ್ಲಿ ಹಲವಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು