Thursday, July 3, 2025

ಸತ್ಯ | ನ್ಯಾಯ |ಧರ್ಮ

ಅಕ್ಕಿ ಮೇಲಿನ ರಫ್ತು ನಿಷೇಧ ತೆರವು: ಒಂದೇ ವಾರಕ್ಕೆ 10-15 ಪ್ರತಿಶತದಷ್ಟು ಹೆಚ್ಚಿದ ಬೆಲೆ

ಹಬ್ಬ ಹರಿದಿನಗಳ ಈ ಸಮಯದಲ್ಲೇ ದೇಶದಲ್ಲಿ ಅಕ್ಕಿಯ ಬೆಲೆ ವಿಪರೀತವಾಗಿ ಏರುತೊಡಗಿದೆ. ಈಗಾಗಲೇ ತರಕಾರಿ, ಅಡುಗೆ ಎಣ್ಣೆ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪರಿಸ್ಥಿತಿಯಲ್ಲಿ ಅಕ್ಕಿ ಬೆಲೆಯೂ ಏರಿರುರುವುದು ಜನರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಕೇವಲ ಒಂದು ವಾರದಲ್ಲಿ, ದೇಶದಲ್ಲಿ ಅಕ್ಕಿ ಬೆಲೆ ಸುಮಾರು 10-15 ಪ್ರತಿಶತದಷ್ಟು ಹೆಚ್ಚಾಗಿದೆ. ಅಕ್ಕಿ ರಫ್ತಿನ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆಗೆದಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ವರ್ತಕರು.

ವಿಶ್ವ ಅಕ್ಕಿ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ 45ರಷ್ಟಿದೆ. ಅಕ್ಕಿಯನ್ನು ಮುಖ್ಯವಾಗಿ ಭಾರತದಿಂದ ಇರಾನ್, ಸೌದಿ ಅರೇಬಿಯಾ, ಚೀನಾ, ಯುಎಇ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಕೇಂದ್ರವು ಕಳೆದ ವರ್ಷ ಬಾಸ್ಮತಿ ಹೊರತುಪಡಿಸಿ ಇತರ ಅಕ್ಕಿಯ ರಫ್ತಿಗೆ ನಿರ್ಬಂಧಗಳನ್ನು ವಿಧಿಸಿತ್ತು ಮತ್ತು ಪ್ಯಾರಾಬಾಯಿಲ್ಡ್ ಅಕ್ಕಿ ಮೇಲಿನ ಸುಂಕವನ್ನು ಶೇಕಡಾ 20ಕ್ಕೆ ಏರಿಸಿತ್ತು. ಸೆಪ್ಟೆಂಬರ್ 28ರಂದು ಈ ಅಕ್ಕಿಗಳ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಮತ್ತು ಪ್ಯಾರಾಬಾಯಿಲ್ಡ್ ಅಕ್ಕಿ ಮೇಲಿನ ಸುಂಕವನ್ನು ಶೇಕಡಾ 10 ಕ್ಕೆ ಇಳಿಸಲು ಕೇಂದ್ರವು ನಿರ್ಧರಿಸಿತು.

ಹೆಚ್ಚುತ್ತಿರುವ ರಫ್ತಿನೊಂದಿಗೆ ಬೆಲೆಗಳಲ್ಲಿ ಹೆಚ್ಚಳ

ಕೇಂದ್ರದ ನಿರ್ಧಾರದಿಂದ ಭಾರತದಿಂದ ವಿದೇಶಗಳಿಗೆ ಅಕ್ಕಿ ರಫ್ತು ಹೆಚ್ಚಾಗಿದೆ. ಇದರಿಂದ ದೇಶದಲ್ಲಿ ಒಂದು ವಾರದೊಳಗೆ ಅಕ್ಕಿಯ ಬೆಲೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಫ್ರಿಕಾಕ್ಕೆ ಹೆಚ್ಚಾಗಿ ರಫ್ತಾಗುವ ಅಕ್ಕಿಯ ಬೆಲೆ ಈ ಹಿಂದೆ ಕೆಜಿಗೆ 35 ರೂಪಾಯಿ ಇತ್ತು. ಅದು 41 ರೂಪಾಯಿಗೆ ಏರಿಕೆಯಾಗಿದೆ. ಅಕ್ಕಿ ರಫ್ತುದಾರರು ಹೇಳುವಂತೆ ಬಾಸ್ಮತಿ ಅಕ್ಕಿ ಹೊರತುಪಡಿಸಿ ಎಲ್ಲಾ ವಿಧದ ಅಕ್ಕಿಗಳ ಬೆಲೆಗಳು ಶೇಕಡಾ 10-15 ರಷ್ಟು ಹೆಚ್ಚಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page