ಪರ್ತ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಮತ್ತು ನಾಯಕ ರಿಕಿ ಪಾಂಟಿಂಗ್ ಅವರನ್ನು ಅನಾರೋಗ್ಯದ ಕಾರಣದಿಂದಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾಧ್ಯಮಗಳು ನೀಡಿರುವ ವರದಿ ಪ್ರಕಾರ, ಪರ್ತ್ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ 3 ನೇ ದಿನದಾಟದಲ್ಲಿ ಪಾಂಟಿಂಗ್ ಚಾನೆಲ್ 7 ಗಾಗಿ ಕಾಮೆಂಟರಿ ಮಾಡುತ್ತಿದ್ದರು. ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯ ವರದಿಯ ಪ್ರಕಾರ, ಮಧ್ಯಾಹ್ನದ ಊಟದ ಸಮಯದಲ್ಲಿ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಿದ್ದರಿಂದ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿವೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಟೆಸ್ಟ್ ಪಂದ್ಯದ ಮೂರನೇ ದಿನದಂದು ಪಾಂಟಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರ ಹೃದಯ ಸಬಂಧಿ ಸಮಸ್ಯೆ ಕಂಡುಬಂದಿದ್ದರಿಂದ ಮುನ್ನೆಚ್ಚರಿಕೆಯ ತಪಾಸಣೆಗಳನ್ನು ಪಡೆಯಲು ಆಸ್ಪತ್ರೆಗೆ ಹೋದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಕಾರಣ ʼರಿಕಿ ಪಾಂಟಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದಿನ ಉಳಿದ ಪಂದ್ಯಕ್ಕೆ ಕಾಮೆಂಟರಿಯನ್ನು ನೀಡುವುದಿಲ್ಲʼ ಎಂದು ಸೆವೆನ್ ವಕ್ತಾರರು ಹೇಳಿದ್ದಾರೆ.
ಒಂದೆರಡು ವರ್ಷಗಳಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟರಿಗೆ ಇದು ಕಂಟಕವಾಗಿದ್ದು. ಈ ವರ್ಷ(2022), ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದ ಇಬ್ಬರು ದಿಗ್ಗಜ ಆಟಾಗಾರಾದ ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಅವರು ಕೂಡ, ಹೃದಯ ಸಬಂಧಿ ಸಮಸ್ಯೆಯಿಂದ ಸಾವನ್ನಪ್ಪಿದ್ದರು.