Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಗೋಮಾಂಸ ಬೆಂಬಲಿಸಿದ್ದ ರಿಷಿ ಸುನಕ್: ಮುಜುಗರಕ್ಕೆ ಸಿಲುಕಿದ ಬಲಪಂಥೀಯ ಬೆಂಬಲಿಗರು

ಗೋಮಾಂಸ ಬೆಂಬಲಿಸಿದ್ದ ರಿಷಿ ಸುನಕ್: ಮುಜುಗರಕ್ಕೆ ಸಿಲುಕಿದ ಬಲಪಂಥೀಯ ಬೆಂಬಲಿಗರು

0

ನವದೆಹಲಿ: ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿಯವರ ಅಳಿಯ, ಭಾರತೀಯ ಮೂಲದ ರಿಷಿ ಸುನಕ್ ಇಂಗ್ಲೆಡ್ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ, ಗೋಮಾಂಸದ ಕುರಿತು ಅವರು ನೀಡಿದ್ದ ಹೇಳಿಕೆ ಈಗ ಮುನ್ನೆಲೆಗೆ ಬಂದಿದೆ.‌

“ನನ್ನ ಕ್ಷೇತ್ರವು ನೂರಾರು ಗೋಮಾಂಸ ಮತ್ತು ಕುರಿಮಾಂಸ ಉದ್ಯಮದ ನೆಲೆಯಾಗಿದೆ. ಈ ಭಾಗದ ರೈತರು ಪ್ರತಿನಿಧಿಸುವ ಅದ್ಭುತ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿದ್ದೇನೆ. ಜನರ ಆಹಾರದ ಆಯ್ಕೆಗಳು ತಮ್ಮದೇ ಆಗಿರುತ್ತವೆ. ದೇಶ ಮತ್ತು ವಿದೇಶಗಳಲ್ಲಿ ನಮ್ಮ ಜಾನುವಾರು ರೈತರನ್ನು ಬೆಂಬಲಿಸುವ ಸರ್ಕಾರವನ್ನು ನಾನು ಮುನ್ನಡೆಸುತ್ತೇನೆ.”

ಇದು ರಿಷಿ ಸುನಕ್ ಅವರು, ಇದೇ ವರ್ಷ ಜುಲೈ 30ರಂದು‌ ಮಾಡಿದ ಟ್ವೀಟ್ ಆಗಿದ್ದು, ರಿಷಿ ಸುನಕ್ ಇಂಗ್ಲೆಂಡ್ ಪ್ರಧಾನಿಯಾಗುತ್ತಿರುವುದಕ್ಕೆ ಸಂಭ್ರಮಪಡುತ್ತಿರುವ ಭಾರತದ ಬಲಪಂಥೀಯ ಸಂಘಟನೆಗಳು, ಕಾರ್ಯಕರ್ತರನ್ನು ಮುಜುಗರಕ್ಕೆ ದೂಡಿದೆ.

ಇದರ ಜೊತೆಯಲ್ಲಿ ರಿಷಿ ಸುನಕ್ ದನದ ಮಾಂಸದ ಖಾದ್ಯಗಳೊಂದಿಗೆ ಪೋಜು ಕೊಟ್ಟಿರುವ ಫೊಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಿಷಿ ಸುನಕ್ ತಮ್ಮ ಪತ್ನಿಯೊಂದಿಗೆ ಗೋಪೂಜೆ ಮಾಡುತ್ತ, ಭಾರತದ ಬಲಪಂಥೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿಯೇ ಅವರು ಬ್ರಿಟನ್ ಪ್ರಧಾನಿಯಾಗುತ್ತಿರುವುದಕ್ಕೆ ಸಂಭ್ರಮಾಚರಣೆ ಆರಂಭವಾಗಿತ್ತು.

ಆದರೆ, ರಿಷಿ ಸುನಕ್ ಗೋಮಾಂಸ ಉದ್ಯಮವನ್ನು ಬೆಂಬಲಿಸಿ ಮಾತನಾಡಿರುವುದು ಈಗ ಅವರ ಭಾರತೀಯ ಅಭಿಮಾನಿಗಳಿಗೆ ಇಕ್ಕಟ್ಟಿನ ಸ್ಥಿತಿ ನಿರ್ಮಿಸಿದೆ.

You cannot copy content of this page

Exit mobile version