ರೌಡಿಶೀಟರ್ ಕೊಲೆ ; ಫಾಸಿಲ್ ಕೊಲೆಯ ಪ್ರತಿಕಾರ ಅಲ್ಲ ಎಂದು ತಿಳಿಸಿದ್ದಾರೆ: ಯುಟಿ ಖಾದರ್

ಮಂಗಳೂರಿನ ಸುಹಾಸ್‌ ಶೆಟ್ಟಿ ಕೊಲೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಇನ್ನು ಫಾಸಿಲ್ ಕೊಲೆಯ ದಿನವೇ ನಾವು ಅದನ್ನು ದೇವರಿಗೆ ಬಿಟ್ಟಿದ್ದೇವೆ. ಇನ್ನು ಪ್ರತಿಕಾರದ ಮಾತೆಲ್ಲಿ? ನಾವು ಪ್ರತಿಕಾರ ತೀರಿಸಿಕೊಳ್ಳಲು ಯೋಚಿಸಿಯೇ ಇಲ್ಲ ಎಂದು ಫಾಸಿಲ್ ಪೋಷಕರು ಹೇಳಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯುಟಿ ಖಾದರ್ ಪ್ರಕರಣದ ಹಿನ್ನೆಲೆಯಲ್ಲಿ ಫಾಸಿಲ್ ಪೋಷಕರೊಂದಿಗೆ ಮಾತನಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೊಲೀಸರಿಗೆ ಸಹಕಾರ ನೀಡಲು ನಾವು ಸಿದ್ಧ. ಯಾವುದೇ ತನಿಖೆ ಎದುರಿಸಲೂ ಸಿದ್ಧ ಎಂದು ಪಾಝಿಲ್‌ ಕುಟುಂಬಸ್ಥರು ನನಗೆ ತಿಳಿಸಿದ್ದಾರೆ. ಎಲ್ಲವೂ ಪೊಲೀಸ್‌ ತನಿಖೆಯ ಮೂಲಕ ಬಹಿರಂಗವಾಗಲಿದೆ. ಮೊದಲು ದುಷ್ಕರ್ಮಿಗಳ ಬಂಧನ ಆಗಬೇಕು. ನಾಗರಿಕರು ಶಾಂತವಾಗಿ ವರ್ತಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೆಲ್ಲವೂ ವೈಯಕ್ತಿಕವಾದ ದ್ವೇಷಕ್ಕಾಗಿ ನಡೆದಿರುವ ಘಟನೆಯಾಗಿದೆ. ಸುಹಾಸ್‌ ಶೆಟ್ಟಿ ಈ ಹಿಂದೆ ಕೀರ್ತಿ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. 2022ರಲ್ಲಿ ನಡೆದ ಫಾಝಿಲ್‌ ಕೊಲೆ ಪ್ರಕರಣದಲ್ಲೂ ಪ್ರಮುಖ ಆರೋಪಿ. ವೈಯಕ್ತಿಕವಾದ ಗುಂಪುಗಳ ನಡುವಿನ ಘರ್ಷಣೆ ಇದು. ಧರ್ಮ ಧರ್ಮದ ದ್ವೇಷ ಅಲ್ಲ ಇದು ಎಂದು ಖಾದರ್‌ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು