Saturday, July 26, 2025

ಸತ್ಯ | ನ್ಯಾಯ |ಧರ್ಮ

ರೈಲಿನಲ್ಲಿ ನಾಲ್ವರನ್ನು ಕೊಂದ RPF ಸಿಬ್ಬಂದಿ ಮಾನಸಿಕವಾಗಿ ಸ್ಥಿರ : ರೈಲ್ವೆ ಇಲಾಖೆ ಚಾರ್ಜ್ ಶೀಟ್ ಸಲ್ಲಿಕೆ

ಜುಲೈ 31 ರಂದು ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ರಿವಾಲ್ವರ್ ಮೂಲಕ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಸೇರಿದಂತೆ 4 ಜನರನ್ನು ಕೊಂದಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಸಂಪೂರ್ಣವಾಗಿ ವಿವೇಕಿಯಾಗಿದ್ದು, ತಾನು ಮಾಡಿದ ಕೆಲಸದ ಬಗ್ಗೆ ಅರಿವು ಇದ್ದೇ ಮಾಡಿದ್ದಾನೆ ಎಂದು ರೈಲ್ವೆ ಇಲಾಖೆ ಆರೋಪ ಪಟ್ಟಿ ಸಲ್ಲಿಸಿದೆ.

1,000 ಪುಟಗಳಷ್ಟು ಉದ್ದವಿರುವ ಮತ್ತು ಮುಂಬೈ ಉಪನಗರಗಳ ಸ್ಥಳೀಯ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ, ರೈಲ್ವೆ ಪೊಲೀಸ್ ಇಲಾಖೆ 150 ಕ್ಕೂ ಹೆಚ್ಚು ಸಾಕ್ಷಿಗಳ ಸಾಕ್ಷ್ಯಗಳನ್ನು ಕಲೆ ಹಾಕಿ, ಈ ಒಂದು ಆರೋಪ ಪಟ್ಟಿ ಸಿದ್ಧಪಡಿಸಿದೆ ಎಂದು ಇಲಾಖೆ ಹೇಳಿದೆ.

GRP ಅಧಿಕಾರಿಗಳ ಪ್ರಕಾರ, ಅವರು ಬೊರಿವಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 164 ರ ಅಡಿಯಲ್ಲಿ ಅಂತಹ ಮೂರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಸಾಕ್ಷಿಗಳ ಸಾಕ್ಷ್ಯಗಳ ಜೊತೆಗೆ, ತನಿಖಾಧಿಕಾರಿಗಳು ರೈಲಿನೊಳಗಿನ ಸಿಸಿಟಿವಿ ದೃಶ್ಯಗಳನ್ನು ಅವಲಂಬಿಸಿದೆ. ಅಲ್ಲಿ ಚೇತನ್ ಸಿಂಗ್ ಕಂಪಾರ್ಟ್‌ಮೆಂಟ್‌ಗಳ ನಡುವೆ ಚಲಿಸುತ್ತಿರುವುದನ್ನು ಕಾಣಬಹುದು ಮತ್ತು ಸಂಭಾವ್ಯ ಬಲಿಪಶುಗಳನ್ನು ಹುಡುಕುತ್ತಿರುವುದನ್ನು ಕಾಣಬಹುದಾಗಿದೆ. ಮಹಾರಾಷ್ಟ್ರದ ಪಾಲ್ಘರ್ ನಿಲ್ದಾಣವನ್ನು ದಾಟಿದ ನಂತರ ಮುಂಬೈ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಗುಂಡು ಹಾರಿಸಿದ ಆರ್‌ಪಿಎಫ್ ಸಿಬ್ಬಂದಿ ಚೇತನ್ ಸಿಂಗ್, ರೈಲ್ವೆ ರಕ್ಷಣಾ ಪಡೆಯ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಸೇರಿದಂತೆ ನಾಲ್ವರು ರೈಲ್ವೆ ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದ ಬಗ್ಗೆ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12956) ಬಿ5 ಕೋಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page