Thursday, September 18, 2025

ಸತ್ಯ | ನ್ಯಾಯ |ಧರ್ಮ

ಝುಲ್ಪಿಕರ್ ಅಹಮದ್ ಗೆ ಬ್ಲಾಕ್ ಮೇಲ್ ನಿಷ್ಪಕ್ಷಪಾತ ತನಿಖೆಗೆ ಆರ್.ಪಿ.ಐ. ಸತೀಶ್ ಆಗ್ರಹ

ಹಾಸನ : ಝುಲ್ಪಿಕರ್ ಅಹಮದ್ ಕಳೆದ ೧೫ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ೨೦೧೮ ರಿಂದ ಸಕಲೇಶಪುರದಲ್ಲಿ ಅಚೀವರ್ಸ್ ಪ್ರಜ್ಞಾ ಪದವಿ ಪೂರ್ವ ಕಾಲೇಜು, ತನ್ನ ಸ್ನೇಹಿತರೊಂದಿಗೆ ಒಟ್ಟಾಗಿ ನಡೆಸುತ್ತಾ ಬಂದಿದ್ದು, ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಎಂದು ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಳೆದ ಕೆಳ ತಿಂಗಳಿಂದ ಇವರ ಇನ್‌ಸ್ಟ್ರಾಗ್ರಾಂ ಖಾತೆ ಗೂ ಕೂಡ ನಿಮ್ಮ ಅಶ್ಲೀಲ ವಿಡಿಯೋ ಇದೆ ಎಂದು ಬೆದರಿಸುತ್ತಾ ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಬೆದರಿಕೆಗೆ ಜಗ್ಯದ ಝುಲ್ಫಿಕರ್ ಅಹಮದ್ ೨೦೨೫ ಆಗಸ್ಟ್ 11 ರಂದು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ 20 ದಿನಗಳ ಹಿಂದೆ ಶ್ರವಣಬೆಳಗೊಳ ಮೂಲದ ಆಝಮ್ ಹಾಗೂ ಸೋಹನ್ ಗೌಡ ಎಂಬ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಈ ಹುಡುಗರು ಸಕಲೇಶಪುರ ಮೂಲದ ಇನ್ನಿತರ ಹಲವು ವ್ಯಕ್ತಿಗಳ ಹೆಸರನ್ನು ಹೇಳಿದ್ದು, ಈ ಹುಡುಗರು ನಿಜವಾಗಿಯೂ ಸತ್ಯ ಹೇಳುತ್ತಿದ್ದಾರೆಯೇ ? ಈ ಆಝಂ ಹಾಗೂ ಸೋಹನ್ ಗೌಡ ಎಂಬ ಹುಡುಗರು ಹೆಸರಿಸುತ್ತಿರುವ ವ್ಯಕ್ತಿಗಳ ವಿವರ ನೀಡಿದ್ದಾರೆ.

ವ್ಯಕ್ತಿಗಳ ಹಿನ್ನೆಲೆ, ಅವರ ಪೂರ್ವಾಪರದ ಮಾಹಿತಿ ಪಡೆಯಬೇಕು. ಈ ಹಿಂದೆ ಈ ರೀತಿಯ ಅಪರಾಧಗಳಲ್ಲಿ ಭಾಗವಹಿಸಿದ್ದಾರೆಯೇ? ಈ ಹುಡುಗರನ್ನು ಯಾರಾದರೂ ಬಳಸಿಕೊಳ್ಳುತ್ತಿದ್ದಾರೆಯೇ, ಫೇಕ್ ವಿಡಿಯೋ ತಯಾರು ಮಾಡಿದವರಾರು? ಫೇಕ್ ವಿಡಿಯೋ ಹರಡಲು ಯಾವ ರೀತಿಯ ಯೋಜನೆ ರೂಪಿಸಿದ್ದರು! ಈ ರೀತಿಯ ಕೃತ್ಯದಲ್ಲಿ ಭಾಗವಹಿಸಲು ಕುಮ್ಮಕ್ಕು ನೀಡಿದವರಾರು? ನಕಲಿ ವಿಡಿಯೋಗಳನ್ನು ಇಲಾಖೆ ಈ ಕೂಡಲೇ ವಶಪಡಿಸಿಕೊಳ್ಳವ ನಿಟ್ಟಿನಲ್ಲಿ ಕ್ರಮವಹಿಸಬೇಕು ಹಾಗೂ ಈ ರೀತಿಯ ವಿಡಿಯೋಗಳು ಯಾರ ಬಳಿ ಇದ್ದರೂ ಸಹ ಈ ಕೂಡಲೇ ಪೊಲೀಸ್ ಇಲಾಖೆಗೆ ಸಲ್ಲಿಸಿ ತನಿಖೆಗೆ ಸಹಕರಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ಒಟ್ಟಾರೆ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಕಾರ್ಯ ಪುವೃತ್ತರಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನಾಗಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಸಂಸ್ಥೆಯ ಹಾಗೂ ವ್ಯಕ್ತಿಯ ವೈಯಕ್ತಿಕ ತೇಜೋವಧೆ ನಡೆಸಲು ಪ್ರಯತ್ನಿಸಿದವರನ್ನು ಬಂಧಿಸಿ, ಈ ರೀತಿಯ ಸೈಬರ್ ಪ್ರಕರಣಗಳನ್ನ ಕಡಿವಾಣ ಹಾಕುವ ಕೆಲಸ ತ್ವರಿತವಾಗಿ ಆಗಬೇಕಿದೆ, ಈ ರೀತಿಯ ಬೆದರಿಕೆಗಳಿಗೆ ಜಗ್ಗದ ಪೊಲೀಸ್ ಇಲಾಖೆಗೆ ದೂರು ನೀಡುವ ಧೈರ್ಯವನ್ನು ಸಾರ್ವಜನಿಕರು ತೋರಿಸಬೇಕಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ದಲಿತ ಸಂಘಟನಾ ಸಮಿತಿಯ ಜಿಲ್ಲಾಧ್ಯಕ್ಷ ಶಾಂತಿಗ್ರಾಮ ಚೇತನ್, ಆರ್.ಪಿ.ಐ. ತಾಲೂಕು ಅಧ್ಯಕ್ಷ ಶರತ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಹರೀಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page