ಬೆಂಗಳೂರು : ನಮ್ಮ ಮೆಟ್ರೋ ದಲ್ಲಿ ರೂಲ್ಸ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದೆ. ಪ್ರಯಾಣದ ವೇಳೆ ಊಟ ಮಾಡಿದ ಮಹಿಳೆಗೆ ಇದೀಗ ಅಧಿಕಾರಿಗಳು ಫೈನ್ ಹಾಕಿದ್ದಾರೆ.
ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಹಿಳಾ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಈ ಬಗ್ಗೆ ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ. ಊಟ ಮಾಡಿದ ಮಹಿಳೆಗೆ 500 ರೂ.ದಂಡ ವಿಧಿಸಿರೋದಾಗಿ ಬಿಎಂಆರ್ ಸಿಎಲ್ ಆದೇಶ ಹೊರಡಿಸಿದೆ
ಮಾದವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಪುಯಾಣಿಕರೊಬ್ಬರಿಗೆ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ₹ 500/- ದಂಡ ವಿಧಿಸಲಾಗಿದೆ. ಏಪ್ರಿಲ್ 26, 2025 ರಂದು ಮೆಟ್ರೋದಲ್ಲಿ ಪ್ರಯಾಣಿಸುವಾಗ ಅವರು ಊಟ ಮಾಡುವ ಮೂಲಕ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದರು, ಈ ಉಲ್ಲಂಘನೆಯನ್ನು ಸಹ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.
ಇಂದು ಬೆಳಿಗ್ಗೆ ನೈಸ್ ರಸ್ತೆ, ಜಂಕ್ಷನ್ ನಲ್ಲಿರುವ ಮಾದವರ ಮೆಟ್ರೋ ನಿಲ್ದಾಣವನ್ನು ಮಹಿಳೆ ಪ್ರವೇಶಿಸಿದಾಗ ಭದ್ರತಾ ಸಿಬ್ಬಂದಿ ಅವರಿಗೆ ದಂಡ ವಿಧಿಸಿದ್ದಾರೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.