Friday, July 12, 2024

ಸತ್ಯ | ನ್ಯಾಯ |ಧರ್ಮ

ಆರ್‌ಎಸ್‌ಎಸ್ ಸಿದ್ಧಾಂತ ದೇಶಕ್ಕೆ ಅಪಾಯಕಾರಿ: ಖರ್ಗೆ

ದೆಹಲಿ: ರಾಜ್ಯಸಭೆಯಲ್ಲಿ ಟೀಕೆ, ಪ್ರತ್ಯಾರೋಪಗಳಿಂದ ವಾತಾವರಣ ಬಿಸಿಯಾಯಿತು. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್ ತನ್ನ ಪುರುಷರನ್ನು ವಿಶ್ವವಿದ್ಯಾಲಯಗಳು ಮತ್ತು ಎನ್‌ಸಿಇಆರ್‌ಟಿಯಂತಹ ಶಿಕ್ಷಣ ಸಂಸ್ಥೆಗಳಲ್ಲಿ ಉಪಕುಲಪತಿಗಳು ಮತ್ತು ಪ್ರಾಧ್ಯಾಪಕರನ್ನಾಗಿ ಸೇರಿಸುತ್ತಿದೆ ಎಂದು ಅವರು ಆರೋಪಿಸಿದರು. ಒಂದು ಸಂಘಟನೆ (ಆರ್‌ಎಸ್‌ಎಸ್) ಈಗ ದೇಶದ ಎಲ್ಲ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಟೀಕಿಸಿದರು. ದೇಶದ ಪ್ರಮುಖ ಸಂಸ್ಥೆಗಳನ್ನು ನಾಶ ಮಾಡಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೈಜೋಡಿಸುತ್ತಿವೆ ಎಂದು ಖರ್ಗೆ ಆರೋಪಿಸಿದರು.

ಖರ್ಗೆ ಅವರ ಹೇಳಿಕೆಗೆ ಎನ್‌ಡಿಎ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭಾ ಸಭಾಪತಿ ಜಗದೀಪ್ ಧನಕಡ್ ಕೂಡ ಖರ್ಗೆ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಹಿಂದೆ ಸರಿಯದ ಖರ್ಗೆ, ಆ ಬಳಿಕವೂ ಟೀಕೆಗಳ ದಾಳಿಯನ್ನು ಮುಂದುವರಿಸಿದ ಅವರು, ಆರ್‌ಎಸ್‌ಎಸ್‌ ಸಿದ್ಧಾಂತ ದೇಶಕ್ಕೆ ಅಪಾಯಕಾರಿ.

Related Articles

ಇತ್ತೀಚಿನ ಸುದ್ದಿಗಳು