ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಪ್ರಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ಅನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿದೆ.
ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ, ಹಲವು ಭಾಷೆಗಳಿಗೆ ಡಬ್ ಆಗಲಿರುವ ಸಲಾರ್, ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ ಚಿತ್ರವಾಗಿದ್ದು, ಶೂಟಿಂಗ್ ನಡೆಯುತ್ತಿದೆ.
ಪ್ರಥ್ವಿರಾಜ್ ಸುಕುಮಾರನ್ ಅವರ ಜನ್ಮದಿನವಾದ ಇಂದು ಹೊಸ ಪೋಸ್ಟರ್ ರಿಲೀಜ್ ಆಗಿದ್ದು, ಪ್ರಥ್ವಿರಾಜ್ ವಿಭಿನ್ನ ಬಗೆಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ವರದರಾಜ ಮನ್ನಾರ್ ಎಂಬ ಹೆಸರಿನ ಪಾತ್ರವನ್ನು ಪ್ರಥ್ವಿರಾಜ್ ನಿರ್ವಹಿಸುತ್ತಿದ್ದು, ಹೊಸ ಪೋಸ್ಟರ್ ಸಲಾರ್ ಕುರಿತು ಮತ್ತಷ್ಟು ಕುತೂಹಲ ಮೂಡಿಸಿದೆ